ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಜೃಂಭಣೆಯಿಂದ ನಡೆಯಿತು ಕುಂಬಳಗೋಡು ಗ್ರಾಮದೇವತೆ ಜಾತ್ರೆ !

ರಿಪೋರ್ಟ್- ರಂಜಿತಾಸುನಿಲ್..

ಬೆಂಗಳೂರು: ಬೆಂಗಳೂರಿನ ಕುಂಬಳಗೋಡಿನಲ್ಲಿ 7 ವರ್ಷದ ನಂತರ ಅದ್ಧೂರಿಯಾಗಿಯೇ ಊರ ಜಾತ್ರಾ ಮಹೋತ್ಸ ನಡೆಯಿತು. ಒಂದು ವಾರದಿಂದ ನಡೆಯುತ್ತಿರುವ ಈ ಜಾತ್ರೆಯಲ್ಲಿ ಬಾಳೆ ಮರವನ್ನು ಕಡೆದು ಊರ ಜಾತ್ರೆಗೆ ಚಾಲನೆ ನೀಡುತ್ತಾರೆ. ನಂತರ ಬಸವಣ್ಣನಿಗೆ ಒಂದು ಆರತಿ, ಸಂಜಿವಯ್ಯನ ಆರತಿ, ಊರ ದೇವಿಯ ಮಾರಮ್ಮನ ಆರತಿ, ಒಟ್ಟು 5 ಆರತಿಗಳನ್ನ ಮಾಡಿ ದೇವರಿಗೆ ನಮಿಸುತ್ತಾರೆ.

ಈ ಭಾಗದಲ್ಲಿ ಏನಿಲ್ಲ ಅಂದ್ರು 2000 ಆರತಿಗಳನ್ನ ಹೊತ್ತು ಗ್ರಾಮಸ್ಥರು ಊರಿನ ಸುತ್ತಾ ಬರುತ್ತಾರೆ. ಈ ಹಬ್ಬದಲ್ಲಿ ಕೊನೆಯ ದಿನ ಮಾರಮ್ಮನ ಆರತಿ ದಿವಸ ಕೊಂಡದ ಮೇಲೆ ಆರತಿ ಹೊತ್ತು ನಡೆಯೋದು ಇಲ್ಲಿನ ವಿಶೇಷ. ದೇವರಿಗೆ ಕಡಿದ ಮೇಕೆ- ಕುರಿಯನ್ನ ಅಡುಗೆ ಮಾಡಿ ಮಾರಮ್ಮನಿಗೆ ನೈವೇದ್ಯ ಇಟ್ಟು ಸಂಬಂಧಿಕರೆನ್ನೆಲ್ಲ ಕರೆದು ಊಟ ಹಾಕುತ್ತಾರೆ.

ಮಟನ್ ಸಾರು, ಮುದ್ದೆ, ಅನ್ನ,ಚಿಕನ್ ಫ್ರೈ, ಕಬಾಬ್ ,ಚಿಕನ್ ಸಾರು, ಸೌತೆಕಾಯಿ, ಈರುಳ್ಳೆ, ಮೊಟ್ಟೆ ಬಗೆ-ಬಗೆಯ ಭಕ್ಷ ಭೋಜನಗಳ ಸಿದ್ದಗೊಳ್ಳುತ್ತವೆ. ನಂತರ ಊರಿನವರೆಲ್ಲ ಒಟ್ಟಾಗಿ ಸೇರಿ ಎಲ್ಲಾ ದೇವಿಗೆ ನಾನಾ ರೀತಿಯ ಹೂವುಗಳನ್ನ ಹಾಕಿ ಮತ್ತೆ ಅಲಂಕಾರ ಮಾಡಿ ಪೂಜೆ ಮಾಡಿಸುತ್ತಾರೆ.

Edited By : Manjunath H D
Kshetra Samachara

Kshetra Samachara

22/06/2022 04:59 pm

Cinque Terre

1.87 K

Cinque Terre

0

ಸಂಬಂಧಿತ ಸುದ್ದಿ