ವರದಿ- ರಂಜಿತಾ ಸುನಿಲ್
ಬೆಂಗಳೂರು: ಬೆಂಗಳೂರಿನಲ್ಲಿ ಇತಿಹಾಸ ಹೊಂದಿರುವ ಬಂಡೆಮಠಕ್ಕೆ ಅದರದ್ದೇ ಆದ ಪ್ರತಿಷ್ಟೆ ಇದೆ. ಉನ್ನತ ಶಿಕ್ಷಣಕ್ಕಾಗಿ ಶಾಲಾ ಕಟ್ಟಡವನ್ನ ನಿರ್ಮಿಸಲಾಗಿದೆ. ಇದರ ಉದ್ಘಾಟನೆಯನ್ನ ಬಂಡೆಮಠದ ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಸಚಿವ ಎಸ್.ಟಿ ಸೋಮಶೇಖರ್ ನೆರವೇರಿಸಿದರು. ಇನ್ನು ಬಂಡೆಮಠದ ಸ್ವಾಮಿಗಳಿಗೆ ಸುವರ್ಣೋತ್ಸವ ಹಿನ್ನಲೆ ಎಲ್ಲ ಗಣ್ಯಾತಿಗಣ್ಯರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.
ಇನ್ನೂ ಬಹಳ ಸೊಬಗಿನಿಂದ ಕಾರ್ಯಕ್ರಮ ಕೂಡಿದ್ದು, ಕಾರ್ಯಕ್ರಮದಲ್ಲಿ ವೀರಗಾಸೆ, ಗೊಂಬೆ ಕುಣಿತ, ಡೊಳ್ಳು ಕುಣಿತ, ತಮಟೆ ಎಲ್ಲವೂ ಕಾರ್ಯಕ್ರಮದಲ್ಲಿ ಕಳೆಕಟ್ಟಿತ್ತು.
ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ ಈ ಕ್ಷೇತ್ರ ಬಹಳ ಪ್ರಸಿದ್ಧವಾದ ಸ್ಥಳವಾಗಿದೆ. ಈ ಪುಣ್ಯಕ್ಷೇತ್ರಕ್ಕೋಸ್ಕರ ನಾನು ಯಾವಾಗಲೂ ಶ್ರಮಿಸುತ್ತೇನೆ. ಇಂತಹ ಸ್ಥಳದಲ್ಲಿ ಎಲ್ಲಾ ಮಕ್ಕಳು ವಿದ್ಯೆ ಕಲಿಯಬೇಕು ಎಂದರು.
PublicNext
05/06/2022 04:05 pm