ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿನ್ನ ಆಮದಾಗುವುದು ಮುಸ್ಲಿಂ ರಾಷ್ಟ್ರಗಳಿಂದ, ಅಂಗಡಿಗಳಲ್ಲಿ ಖರೀದಿ ಏಕೆ ಬೇಡ..?'

ಬೆಂಗಳೂರು: ಹಿಂದೂ-ಮುಸ್ಲಿಂ ಧರ್ಮಗಳ ಮಧ್ಯೆ ಎದ್ದಿರುವ ಸಂಘರ್ಷ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹಿಜಾಬ್ ವಿವಾದದಿಂದ ಆರಂಭವಾಗಿ ಹಲಾಲ್ ಮಾಂಸ ಖರೀದಿಗೆ ನಿಷೇಧ, ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಬಾರದೆಂಬ ಕಟ್ಟುನಿಟ್ಟು ಈಗ ಚಿನ್ನದ ಅಂಗಡಿಯವರೆಗೂ ಬಂದು ನಿಂತಿದೆ.

ಮುಸ್ಲಿಂ ಧರ್ಮದವರ ಚಿನ್ನದ ಅಂಗಡಿಗಳು, ಮಳಿಗೆಗಳಿಂದ ಹಿಂದೂಗಳು ಬರುವ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಬಾರದೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಶೇಕಡಾ 30ರಷ್ಟು ಚಿನ್ನದ ವ್ಯಾಪಾರಿಗಳಿದ್ದು ಅದರಲ್ಲಿ ಶೇಕಡಾ 10ರಷ್ಟು ಮುಸ್ಲಿಂ ವ್ಯಾಪಾರಿಗಳಿದ್ದಾರೆ. ಇಂತಹ ಅಭಿಯಾನಗಳು ಖಂಡಿತಾ ಒಳ್ಳೆಯದಲ್ಲ, ಇದು ಎರಡೂ ಧರ್ಮದವರ ಸಂಘರ್ಷಕ್ಕೆ ಪುಷ್ಟಿ ನೀಡುತ್ತದೆ, ಸರ್ವ ಜನಾಂಗದ ಶಾಂತಿಯ ತೋಟ ಎನಿಸಿರುವ ಕರ್ನಾಟಕ ರಾಜ್ಯದ ಜನತೆಗೆ ಇದು ಒಳ್ಳೆಯದಲ್ಲ ಎನ್ನುತ್ತಾರೆ ಚಿನ್ನದ ವ್ಯಾಪಾರಿಗಳು.

ಒಟ್ಟಾರೆ ಹಲಾಲ್,ಜಟ್ಕಾ, ಹಿಜಾಬ್ ಇದೀಗ ಚಿನ್ನದ ವ್ಯಾಪಾರದ ಬಗ್ಗೆ ಹಿಂದೂ - ಮುಸ್ಲಿಂ ನಡುವೆ ಜಟಾಪಟಿಗೆ ಕಾರಣವಾಗುತ್ತಿದೆ.

ವರದಿ - ಗಣೇಶ್ ಹೆಗಡೆ

Edited By :
PublicNext

PublicNext

25/04/2022 10:17 pm

Cinque Terre

42.51 K

Cinque Terre

7

ಸಂಬಂಧಿತ ಸುದ್ದಿ