ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಮನಾಮಧ್ಯಾನದಲ್ಲಿ ಮಿಂದೆದ್ದ ಸಿಲಿಕಾನ್ ಸಿಟಿ

ಬೆಂಗಳೂರು: ಎಲ್ಲೆಲ್ಲೂ ಜೈ ಶ್ರೀರಾಮ್ ಜೈ ಶ್ರೀರಾಮ್ ಎಂಬ ಘೋಷಣೆಯದ್ದೇ ಝೇಂಕಾರ. ಕಣ್ಣು ಹಾಯಿಸಿದಲ್ಲೆಲ್ಲಾ ಕೇಸರಿ ಧ್ವಜಗಳದ್ದೇ ಸಾಲುಸಾಲು. ರಸ್ತೆ ರಸ್ತೆಗಳಲ್ಲಿ ಪಾನಕ ಕೋಸಂಬರಿಗಳ ವಿತರಣೆ ಎಲ್ಲಾ ರಾಮ- ಹನುಮ ಮಂದಿರಗಳಲ್ಲೂ ವಿಷೇಶ ಅಲಂಕಾರ,ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಇದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಶ್ರೀರಾಮಮವಮಿ ದಿವಸ ಕಂಡು ಬಂದ ದೃಶ್ಯ.

ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಹಬ್ಬ ಆಚರಿಸಲಾಗದ ಜನರೆಲ್ಲರೂ ಈ ಬಾರಿ ಸಿಕ್ಕಿದ್ದೇ ಚಾನ್ಸು ಅಂತ ರಾಮನಾಮಧ್ಯಾಮದಲ್ಲಿ, ಸಂಭ್ರಮದಲ್ಲಿ ಮಿಂದೆದ್ದರು. ಬೆಂಗಳೂರಿನ ಸುಪ್ರಸಿದ್ಧ ರಾಜಾಜಿನಗರದ ರಾಮಮಂದಿರದಲ್ಲಿ ಬೆಳಿಗ್ಗೆಯಿಂದಲೇ ಜನಸಾಗರ ಸೇರಿತ್ತು. ದೇವರಿಗೆ ವಿಶೇಷ ಅಭಿಷೇಕ ಅಲಂಕಾರ ಪೂಜೆ ಪ್ರಸಾದ ವಿತರಣೆ ನಡೆಯಿತು.

ಹಾಗೆಯೇ ಚಿಕ್ಕಪೇಟೆ ಯಲ್ಲಿ ಪಂ. ದೀನ್ ದಯಾಳ್ ಸೇವಾಸಮಿತಿ,ಓಂಕಾರ ಯುವಸೇನೆ ಹಾಗೂ ಶ್ರೀರಾಮ ಸೇವಾ ಸಮಿತಿ ವತಿಯಿಂದ ಬಿಜೆಪಿ ಮುಖಂಡ ಶಿವಕುಮಾರ ಅವರ ನೇತೃಯಗವದಲ್ಲಿ ಬೃಹತ್ ಶ್ರೀರಾಮರಥ ಮೆರವಣಿಗೆ ನಡೆಯಿತು. ಸಂಸದ ಪಿಸಿ ಮೋಹನ್ ಹಿಂದೂ ಜಾಗರಣ ವೇದಿಕೆಯ ದೋ ಕೇಶವಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡರು. ಪಾನಕ ಕೋಸಂಬರಿ, ಸಿಹಿವಿತರಣೆ ಜೊತೆ ಅನ್ನದಾನವನ್ನೂ ಏರ್ಪಡಿಸಲಾಹಿತ್ತು. ಚಿಕ್ಕಪೇಟೆ ಬಳೇಪೇಟೆ, ಕಾಡನ್ ಪೇಟೆ ಸೇರಿದಂತೆ ಬೆಂಗಳೂರಿನ ಹೃದಯಭಾಗ ಎಂದು ಪರಿಗಣಿತವಾದ ಮೆಜೆಸ್ಟಿಕ್ ಪ್ರದೇಶದಲ್ಲಿ ಅತೀವಿಜ್ರಂಭಣೆಯ ರಾಮರಥ ಸಂಚರಿಸಿತು.

ಪ್ರವೀಣ್ ರಾವ್

Edited By :
Kshetra Samachara

Kshetra Samachara

11/04/2022 08:14 am

Cinque Terre

5.16 K

Cinque Terre

0

ಸಂಬಂಧಿತ ಸುದ್ದಿ