ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿಯ ಹಲೆವೆಡೆ ರಾಮನವಮಿ ಸಡಗರ ಸಂಭ್ರಮ..!

ಬೆಂಗಳೂರು: ರಾಮ ಎಂಬ ಪದವನ್ನ ಕೇಳಿದ್ರೆ ಎಲ್ಲರಿಗೂ ಒಂದು ರೋಮಾಂಚಕ ಅನುಭವ ಆಗೋದು ಖಂಡಿತ. ಇವತ್ತು ರಾಮನವಮಿಯ ಹಿನ್ನೆಲೆ ಎಲ್ಲೆಲ್ಲೂ ವಿಶೇಷ ಪೂಜೆಗಳು ನಡೆಯುತ್ತಿವೆ. ಬಿಸಿಲನ ಬೇಗೆಯಲ್ಲಿರುವ ಜನಕ್ಕೆ ರಾಮನ ಹೆಸರು ಹೇಳಿ ಮಜ್ಜಿಗೆ, ಪಾನಕ, ಕೋಸಂಬರಿ ಕೊಡೋದು ಪ್ರತೀತಿ. ಇನ್ನು ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಏರ್ಪಟ್ಟಿವೆ. ಹಾಗಾದ್ರೆ ನಗರದಲ್ಲಿ ರಾಮನವಮಿಯಂದು ಏನೆಲ್ಲ ವಿಶೇಷ ಇದೆ ನೋಡೋಣ ಬನ್ನಿ..

ನಗರದ ಶ್ರೀರಾಮ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಬಗೆ-ಬಗೆಯ ಹೂವಿನಿಂದ ಅಲಂಕಾರ ಮಾಡಿ, ರಾಮಾಂಜನೇಯನನ್ನು ನೆನೆಯುತ್ತಿದ್ದಾರೆ. ತಲೆಯಮೇಲೆ ರಾಮನನ್ನ ಹೊತ್ತು ಮೆರವಣಿಗೆ ಮಾಡ್ತಿದ್ದಾರೆ..

ರಸ್ತೆಗಳಲ್ಲಿ ಮಜ್ಜಿಗೆ ಪಾನಕ ಹಂಚುತ್ತ, ಎಲ್ಲರೂ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.. ಗುಟ್ಟೆ ಆಂಜನೇಯ ದೇವಸ್ಥಾನದ ಬಳಿ, ಬರೋಬರಿ 100 kg ಕೋಸಂಬರಿ, 2 ಡ್ರಮ್ ಮಜ್ಜಿಗೆ, 2 ಡ್ರಮ್ ಪಾನಕ ಹಂಚಿದ್ದಾರೆ. ಈ ಬೇಸಿಗೆಯ ಬೇಗೆ ನೀಗಿಸಿಕೊಳ್ಳುತ್ತ ‌ಮಜ್ಜಿಗೆ, ಪಾನಕ ಕುಡಿಯುತ್ತಾ, ಜೈ ಶ್ರೀರಾಮ್ ಎನ್ನುತ್ತಿದ್ದಾರೆ..

ರಂಜಿತ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
Kshetra Samachara

Kshetra Samachara

10/04/2022 05:47 pm

Cinque Terre

6.27 K

Cinque Terre

1

ಸಂಬಂಧಿತ ಸುದ್ದಿ