ಯಲಹಂಕ: ನಾಡ ದೇವರಾದ ಶ್ರೀವೇಣುಗೋಪಾಲ ಸ್ವಾಮಿಯ ನೂತನ ಬ್ರಹ್ಮರಥ, ನೂತನ ಧ್ವಜಸ್ತಂಭ ಪ್ರತಿಷ್ಠಾಪನಾ ಸಹಿತ ಜೀರ್ಣೋದ್ಧಾರ ಮಹೋತ್ಸವದ ಮೊದಲ ಬ್ರಹ್ಮರಥೋತ್ಸವ ಯಲಹಂಕದಲ್ಲಿ ನಡೆಯಿತು.
ಯಲಹಂಕ ಶಾಸಕ ವಿಶ್ವನಾಥ್ ರಥ ಎಳೆಯುವುದಕ್ಕೆ ಚಾಲನೆ ನೀಡಿದ್ದಾರೆ. ಸಾವಿರಾರು ಜನ ಭಕ್ತರು ರಥ ಎಳೆದು ನಗರದ ಪ್ರದೇಶದಲ್ಲೂ ಗ್ರಾಮೀಣ ಸೊಗಡು ಇನ್ನು ಜೀವಂತವಾಗಿದೆ ಎಂಬುದಕ್ಕೆ ರಥೋತ್ಸವವೇ ಸಾಕ್ಷಿ ಆಯಿತು.
Byte:-ಮುರಳೀಧರ ಭಟ್ಟರು, ಅರ್ಚಕರು, ವೇಣುಗೋಪಾಲ ದೇವಸ್ಥಾನ
ನಗರದೇವರು, ಸಂತಾನ ಗೋಪಾಲನು ಆದ ವೇಣುಗೋಪಾಲನಿಗೆ ಹೊಸರಥ ಮತ್ತು ಧ್ವಜಸ್ತಂಭ ನೂತನವಾಗಿ ನಿರ್ಮಿಸಲ್ಪಟ್ಟಿವೆ. ದಾನಿಗಳು ಮತ್ತು ಯಲಹಂಕ ಶಾಸಕರ ಪ್ರೋತ್ಸಾಹದ ನೆರವಿನಿಂದ ಒಂದು ಕೋಟಿ ವೆಚ್ಚದಲ್ಲಿ ರಥ, ಧ್ವಜಸ್ತಂಭ ಮತ್ತು ದೇವಾಲಯದ ಜೀರ್ಣೋದ್ಧಾರ ಮಾಡಿ ಎರಡು ಬ್ರಹ್ಮಥೋತ್ಸವ ಮಾಡಲಾಗುತ್ತಿದೆ. ಇದರ ಮೊದಲೆ ಬ್ರಹ್ಮರಥೋತ್ಸವ ಮಧ್ಯಾಹ್ನ ನೆರವೇರಿದೆ. ದೇವರ ಸಂಪ್ರೋಕ್ಷಣಾ ವಿಧಿವಿಧಾನ, ಪ್ರಾಣಪ್ರತಿಷ್ಠಾಪನೆ, ಕುಂಬಾಭಿಷೇಕ ನಡೆದಿವೆ.
Byte:-ಮಾರ್ಕಂಡೇಯ, ವೇಣುಗೋಪಾಲ ಸ್ವಾಮಿ ಭಕ್ತರು..
ಉಡುಪಿಯ ಕೋಟೇಶ್ವರದಲ್ಲಿ 77 ಲಕ್ಷದಲ್ಲಿ ಸಿದ್ದವಾಗಿರುವ ರಥ ಮತ್ತು ದಾಂಡೇಲಿಯ ತೇಗದ ಮರದಿಂದ ತಯಾರಾಗಿರುವ ಧ್ವಜಸ್ತಂಭಗಳ ಅಳವಡಿಕೆಯ ತಾಲೀಮು ರೀತಿ ಮೊದಲ ಬ್ರಹ್ಮರಥೋತ್ಸವ ನಡೆದಿದೆ. ಬರುವ ಏಪ್ರಿಲ್ 16 ರಂದು ಬೃಹತ್ ಜಾತ್ರೆ ನಡೆಯಲಿದ್ದು , ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವರ ಕೃಪೆಗೆ ಪಾತ್ರರಾಗಿ.
SureshBabu Public Next..ದೇವನಹಳ್ಳಿ..
Kshetra Samachara
07/04/2022 12:38 pm