ಬೆಂಗಳೂರು: ಹಿಂದೂತ್ವ ಸಂಘಟನೆಗಳು ಹಲಾಲ್ ಮಾಂಸವನ್ನು ಖರೀದಿಸದಂತೆ ಹಿಂದೂಗಳಿಗೆ ಒತ್ತಾಯಿಸಿದ್ದವು. ಆದರೆ ಬೆಂಗಳೂರಿಗರು ಹಿಂದೂ ಮತ್ತು ಮುಸಲ್ಮಾನರ ನಡುವಿನ ಏಕತೆಯನ್ನು ತೋರಿಸಿದ್ದಾರೆ.
ಹೌದು ಹೊಸ ತೊಡಕು ದಿನವಾದ ಇಂದುಲ್ಲಿ ಅನೇಕ ಹಿಂದೂಗಳು ಬೆಂಗಳೂರಿನ ಮುಸ್ಲಿಂ ಅಂಗಡಿಗಳಿಂದ ಹಲಾಲ್ ಮಾಂಸವನ್ನು ಖರೀದಿಸುತ್ತಿರುವುದು ಸಾಮಾನ್ಯವಾಗಿತ್ತು ಜೊತೆಗೆ ಜಟ್ಕಾ-ಹಲಾಲ್ ವಿಷಯಕ್ಕೆ ಡೋಂಟ್ ಕೇರ್ ಎಂದ ಮಂದಿ ಇಷ್ಟ ಮಾಂಸ ಖರೀದಿಸಿ ಭಾನುವಾರವಾದ ಿಂದು ಸಖತ್ ಬಾಡೂಟ ಮಾಡಿದ್ದಾರೆ.
ಒಟ್ಟಾರೆಯಲ್ಲಿ ಬಿಟಿಎಂ ಲೇಔಟ್, ಜಯನಗರ 9ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಜೆಪಿನಗರದಲ್ಲಿ ಹಿಂದೂಗಳು ಹಲಾಲ್ ಕಟ್ ಮಾಂಸವನ್ನು ಖರೀದಿಸಿದ್ದಾರೆ. ಮಾತ್ರವಲ್ಲದೆ ಬೆಂಗಳೂರಿನಾದ್ಯಂತ ಮುಸ್ಲಿಂ ಅಂಗಡಿಗಳಲ್ಲಿ ಮಾಂಸ ಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವುದು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಸಾರಿದೆ
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
03/04/2022 05:17 pm