ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರ ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಗ್ರಾಮದ ಶ್ರೀ ಭದ್ರಕಾಳಮ್ಮ ಮತ್ತು ಶ್ರೀವೀರಭದ್ರ ಸ್ವಾಮಿ ಜಾತ್ರೋತ್ಸವ ಅಂಗವಾಗಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಮತ್ತು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಈ ವರ್ಷವೂ ಶ್ರೀವೀರಭದ್ರಸ್ವಾಮಿ ಬ್ರಹ್ಮ ರಥೋತ್ಸವ ನಡೆದಿದ್ದು, ಶಾಸಕ ಕೆ.ಶ್ರೀನಿವಾಸಮೂರ್ತಿ ಚಾಲನೆ ನೀಡಿದರು.
ಶ್ರೀವೀರಭದ್ರ ಸ್ವಾಮಿ ದೇವಾಲಯ ಅಪಾರ ಭಕ್ತ ಸಮೂಹ ಹೊಂದಿದ್ದು, ಬ್ರಹ್ಮರಥೋತ್ಸವ ದಿನವಾದ ಇಂದು ಕುಂಭಸ್ಥಾಪನೆ, ಮಹಾಮಡೆ, ಗಣಹೋಮ, ಆರತಿ, ಅಗ್ನಿಕುಂಡ ಸಹಿತ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು.
ಅಲ್ಲಲ್ಲಿ ದೇವಾಲಯದ ಕೆಲ ಒಕ್ಕಲರು 67ಕ್ಕೂ ಹೆಚ್ಚು ಅರಒಂಟಿಕೆ ನಿರ್ಮಿಸಿದ್ದು, ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಪ್ರಸಾದ ವಿತರಿಸಿದ್ರೆ, ಇನ್ನೂ ಕೆಲ ಒಕ್ಕಲರು ಹೋಳಿಗೆಯೂಟ ಉಣಬಡಿಸಿದರು.
ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶವನ್ನೂ ಲೆಕ್ಕಿಸದೆ ಬಂದ್, ಪ್ರತಿಭಟನೆಗಿಳಿದ ಮುಸ್ಲಿಮರ ವಿರುದ್ಧ ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಮರ ಅಂಗಡಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸದಂತೆ ಭಜರಂಗದಳ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಆದ್ರೂ ನೂರಾರು ಮುಸ್ಲಿಮರು ಅಂಗಡಿಯಿಟ್ಟು ಈ ಜಾತ್ರೆಯಲ್ಲಿ ವ್ಯಾಪಾರ ನಡೆಸಿದರು.
PublicNext
25/03/2022 09:03 am