ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರಾಂತ್ಯದ ಕರ್ಪ್ಯೂ ಹಿನ್ನೆಲೆ ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವ ರದ್ದು

ದೊಡ್ಡಬಳ್ಳಾಪುರ: ಪ್ರಮುಖ ನಾಗರಾಧನೆಯ ಕ್ಷೇತ್ರವಾದ ಘಾಟಿ ಸುಬ್ರಮಣ್ಯದಲ್ಲಿ ಇಂದು ನಡೆಯಬೇಕಿದ್ದ ಬ್ರಹ್ಮರಥೋತ್ಸವವನ್ನು ಸರ್ಕಾರದ ಆದೇಶದ ಮೇರೆಗೆ ರದ್ದು ಮಾಡಲಾಗಿದೆ.

ಕೋವಿಡ್ -19 ಸೊಂಕು ಹರಡುವಿಕೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾನ್ಯ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಪ್ಯೂ ಮತ್ತು ವಾರಾಂತ್ಯ ದಿನಗಳಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದ್ದು, ಶುಕ್ರವಾರ ರಾತ್ರಿ ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರಿಗೂ ಕರ್ಪ್ಯೂ ಜಾರಿಯಲ್ಲಿರಲಿದೆ, ಈ ಕಾರಣದಿಂದ್ದಾಗಿ ಇಂದು ನಡೆಯಬೇಕಿದ್ದ ಘಾಟಿ ಸುಬ್ರಮಣ್ಯಸ್ವಾಮಿ ಬ್ರಹ್ಮರಥೋತ್ಸವವನ್ನು ರದ್ದು ಮಾಡಲಾಗಿದ್ದು, ದೇವಸ್ಥಾನಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ ಮಾಡಲಾಗಿದೆ.

ಪ್ರತಿವರ್ಷ ಆಚರಣೆಯಲ್ಲಿರುವ ಬ್ರಹ್ಮರಥೋತ್ಸವ ಆಚರಣೆಯಲ್ಲಿದ್ದು, ದೇವಸ್ಥಾನದ ಸಿಬ್ಬಂದಿ ಮತ್ತು ಅರ್ಚಕರ ಸಮ್ಮುಖದಲ್ಲಿ ದೇವಾಲಯದ ಪ್ರಾಂಗಣದಲ್ಲಿ ಸಾಂಕೇತಿಕವಾಗಿ ರಥೋತ್ಸವ ಆಚರಣೆ ನಡೆಯಲಿದೆ, ದೇವಾಲಯದ ಪ್ರಾಂಗಣದಲ್ಲಿರುವ ಸಣ್ಣ ರಥದಲ್ಲಿ ಸುಬ್ರಮಣ್ಯಸ್ವಾಮಿಯನ್ನಿಟ್ಟು ಸಾಂಕೇತಿಕ ರಥೋತ್ಸವ ನಡೆಯಲಿದೆ.

Edited By :
PublicNext

PublicNext

08/01/2022 09:14 am

Cinque Terre

20.22 K

Cinque Terre

0

ಸಂಬಂಧಿತ ಸುದ್ದಿ