ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮರಗಳ ದುಸ್ಥಿತಿಗೆ ಮರುಗಿದ ನಟ ಅನಿರುದ್ಧ್;‌ ಕಂಪನಿಗಳ ವಿರುದ್ಧ ಗರಂ

ಮರಗಳ ಮೇಲೆ ಹಾಕಿರುವ ಜಾಹೀರಾತು ಮತ್ತು ಮೊಬೈಲ್ ನೆಟ್‌ ವರ್ಕ್ ಕಂಪನಿಗಳು, ಕೇಬಲ್‌ ನವರು ಸುತ್ತಿರುವ ವಯರ್ ಕಂಡು ಗರಂ ಆಗಿದ್ದಾರೆ ನಟ ಅನಿರುದ್ಧ್.‌

ಹೌದು... ಜಯನಗರದ 5ನೇ ಬ್ಲಾಕ್ ನಲ್ಲಿರುವ ಮರಗಳಲ್ಲಿ ಎಲ್ಲಿ ನೋಡಿದರೂ ಸ್ಟೆಪ್ಲರ್ ಪಿನ್ ಹೊಡೆದು ಜಾಹೀರಾತು ಅಳವಡಿಸಿರುವುದನ್ನು ಮತ್ತು ಮರಗಳನ್ನು ಸುತ್ತಿರುವ ವಯರ್ ಗಳನ್ನು ಕಂಡು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ವೀಡಿಯೊ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿರುವ ಅನಿರುದ್ಧ್‌, ಮರಗಳಲ್ಲಿ ಜಾಹೀರಾತುಗಳನ್ನು ಅಳವಡಿಸಿರುವವರಿಗೆ ಮತ್ತು ಕೇಬಲ್ ವಯರ್ ಕಟ್ಟಿರುವ ಆಪರೇಟರ್ ಗಳಿಗೆ ಕೂಡಲೇ ಅದನ್ನು ತೆರವು ಮಾಡಿ, ಮುಂದಿನ ದಿನಗಳಲ್ಲಿ ಯಾವುದೇ ಮರಕ್ಕೆ ಹಾನಿ ಮಾಡಬೇಡಿ ಎಂದು ಕಳಕಳಿಯಿಂದ ಮನವಿ ಮಾಡಿಕೊಂಡರು.

- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By :
PublicNext

PublicNext

21/06/2022 05:54 pm

Cinque Terre

28.66 K

Cinque Terre

0

ಸಂಬಂಧಿತ ಸುದ್ದಿ