ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ಗುಂಡಿ ಮುಕ್ತ ಸಿಟಿ ಮಾಡಲು ಬಿಬಿಎಂಪಿ ಹರ ಸಾಹಸ ಪಡುತ್ತಿದೆ. ಇತ್ತೀಚಿಗೆ ಡಿಸಿಎಂ ಆದೇಶದ ಮೇರೆಗೆ ಹೊಸ ತಂತ್ರಜ್ಞಾನ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾದ ಬಿಬಿಎಂಪಿ, ಆ ಕಾರ್ಯವನ್ನು ಅರ್ಧದಲ್ಲೇ ಕೈ ಬಿಟ್ಟಿದೆ.
ಇದೀಗ ನಗರದಲ್ಲಿನ ರಸ್ತೆಗುಂಡಿ ಮುಚ್ಚಲು ಹೊಸ ಟೆಂಡರ್ ಗೆ ಪಾಲಿಕೆ ಸಜ್ಜಾಗುತ್ತಿದೆ. ಇದೇ ಡಿಸೆಂಬರ್ 25 ಕ್ಕೆ ವಿವಿಧ ಕ್ಷೇತ್ರಗಳಲ್ಲಿ ಟೆಂಡರ್ ಮುಕ್ತಾಯಗೊಳಿಸಲು ಬಿಬಿಎಂಪಿ ಮುಂದಾಗಿದೆ. ಇದೇ ನೆಪದಲ್ಲಿ ಮತ್ತೆ ಕೋಟಿ ಕೋಟಿ ಹಣ ರಿಲೀಸ್ ಮಾಡಲು ಟೆಂಡರ್ ಪ್ಲಾನ್ ಮಾಡಿದ್ದು ರಸ್ತೆ ಗುಂಡಿ ಮುಚ್ಚಲು ವಲಯವಾರು ಟೆಂಡರ್ ಕರೆಯಲು ಪಾಲಿಕೆ ಸಜ್ಜಾಗಿದೆ.
PublicNext
06/12/2024 05:45 pm