ಬೆಂಗಳೂರು: ಅವ್ರೆಲ್ಲ ಸ್ನೇಹಿತರು, ಜೊತೆ ಜೊತೆಗೆ ಬೆಳೆದವರು. ಹಣ ಮಾಡ್ಬೇಕು, ಐಶಾರಾಮಿ ಜೀವನ ಸಾಗಿಸಬೇಕು ಅಂತ ಕನಸು ಕಂಡಿದ್ರು. ಆದ್ರೆ, ಈ ಕನಸು ನನಸು ಮಾಡಿಕೊಳ್ಳೋಕೆ ದುಡಿದು ಸಂಪಾದನೆ ಮಾಡೋ ಬದಲಿಗೆ ಅಡ್ಡದಾರಿ ಹಿಡಿದಿದ್ರು. ಹಣ ಮಾಡಲು ಕಳ್ಳತನ ಮಾಡೋ ಪ್ಲಾನ್ ಮಾಡಿಕೊಂಡ ಗೆಳೆಯರು, ಕಳ್ಳತನ ರಿಸ್ಕ್ ಅಂತ ಗಾಂಜಾ ಮಾರಾಟಕ್ಕೆ ಎಂಟ್ರಿ ಕೊಟ್ಟು ಇದೀಗ ಪೊಲೀಸ್ರ ಅತಿಥಿಗಳಾಗಿದ್ದಾರೆ.
ಮೊದಲ ಬಾರಿಗೆ ಗಾಂಜಾ ಮಾರಾಟಕ್ಕೆ ಯತ್ನಿಸಿ ಕೊಡಿಗೇಹಳ್ಳಿ ಪೊಲೀಸರಿಗೆ ಲಾಕ್ ಆಗಿದ್ದಾರೆ. ಅಜಿತ್, ಕಾರ್ತಿಕ್ ಹಾಗೂ ಕಾರ್ತಿಕ್ ಮತ್ತು ರಾಕೇಶ್ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲ ಯಲಹಂಕ ಭಾಗದವರಾಗಿದ್ದಾರೆ. ಆರೋಪಿಗಳು ಈ ಹಿಂದೆ ಕಳ್ಳತನ ಮಾಡ್ತಿದ್ದು ಕಳ್ಳತನ ರಿಸ್ಕ್ ಅಂತ ಗಾಂಜಾ ಮಾರಾಟ ಮಾಡಲು ಪ್ಲಾನ್ ಮಾಡಿದ್ರಂತೆ.
ಒಡಿಶಾದಿಂದ ಗಾಂಜಾ ತರಿಸಿಕೊಂಡು ಆಟೋರಿಕ್ಷಾದಲ್ಲಿ ಮಾರಾಟಕ್ಕೆ ಮುಂದಾದಾಗ ಲಾಕ್ ಆಗಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 8 ಲಕ್ಷ ಮೌಲ್ಯದ 8 ಕೆ.ಜಿ. 600 ಗ್ರಾಂ ಗಾಂಜಾ ಹಾಗೂ ಆಟೋರಿಕ್ಷಾವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
PublicNext
06/12/2024 08:00 pm