ದೊಡ್ಡಗುಬ್ಬಿ ಕೆರೆಲಿ ಈಜಲು ಹೋಗಿದ್ದ ಐದು ಜನರಲ್ಲಿ ಸಾಹಿಲ್, ಇಮ್ರಾನ್ ಮತ್ತು ಮುಬಾರಕ್ ಈಜು ಬಾರದೆ ನೀರಿಗೆ ಬಿದ್ದು ಸಾವನ್ನಪ್ಪಿದ್ದರು. ಕೊತ್ತನೂರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಗುರುವಾರ ಮಧ್ಯಾಹ್ನ ಸಂಜೆ ಆರು ಗಂಟೆವರೆಗೂ ಶೋಧಾಕಾರ್ಯ ನಡೆಸಿದ್ದರು ಶವಗಳು ಪತ್ತೆ ಆಗಿರಲಿಲ್ಲ.
ಶುಕ್ರವಾರ ಬೆಳಗ್ಗೆ 8ಗಂಟೆಯಿಂದ ಎರಡು SDRF ಮತ್ತು ಒಂದು ಅಗ್ನಿಶಾಮಕ ಸಿಬ್ಬಂದಿಯ ತಂಡ ದೊಡ್ಡಗುಬ್ಬಿ ಕೆರೆಯಲ್ಲಿ ಶೋಧಾಕಾರ್ಯ ನಡೆಸಿದರು. ಅಂತು ಬೆಳಗ್ಗೆ 10 ಗಂಟೆಗೆ ಸಂಪಿಗೇಹಳ್ಳಿ ವ್ಯಾಪ್ತಿ ಫಾತಿಮಾನಗರದ ಸಾಹಿಲ್ ಶವ ಪತ್ತೆಯಾಗಿತ್ತು. ಆದರೆ ಸಂಜೆ 6ಗಂಟೆಯವರೆಗೂ ಶೋಧಕಾರ್ಯ ನಡೆದಿದ್ದರು ಇನ್ನಿಬ್ಬರ ಶವ ಪತ್ತೆಯಾಗಿರಲಿಲ್ಲ.
ಇನ್ನೇನು ಇವತ್ತಿನ ಶೋಧಾಕಾರ್ಯ ಮುಗಿಸಬೇಕು ಎನ್ನುವಷ್ಟರಲ್ಲಿ ಇಮ್ರಾನ್ ಪಾಷಾ ಮತ್ತು ಮುಬಾರಕ್ ಶವಗಳು ಪತ್ತೆಯಾದವು. ಈ ಮೂಲಕ 16ರಿಂದ 20 ವರ್ಷ ವಯಸ್ಸಿನ ಮೂರು ಜನ ಯುವಕರ ಶವ ಪತ್ತೆಯಾಗಿವೆ. ಕೊತ್ತನೂರು ಪೊಲೀಸರು ದುರಂತ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆದರೆ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮತ್ತು ನೋವು ಹೇಳಿಕೊಳ್ಳಲಾರದ್ದು.
Kshetra Samachara
28/05/2022 01:05 pm