ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಮುದಾಯ ಗುರಿಯಾಗಿಸಿ ಅಭಿಯಾನ ಮಾಡ್ತಿಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: PayCm ಅಭಿಯಾನದ ಮೂಲಕ ಕಾಂಗ್ರೆಸ್ ಪಕ್ಷ ಯಾವುದೇ ಸಮುದಾಯವನ್ನು ಗುರಿಯಾಗಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು KPCC ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಲಿಂಗಾಯತ ಸಮುದಾಯದ ಟಾರ್ಗೆಟ್ ವಿಚಾರ PayCm ಸಮರ್ಥನೆಗೆ ಮಾಡಿಕೊಂಡಿರುವ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮಾಡಿದ್ದಾರೆ.

PayCm ಅಭಿಯಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರದ ಮುಖವಾಡ ಕಳಚುವ ಪೋಸ್ಟರ್ ಹೊರತು, ಇದಕ್ಕೆ ಇನ್ನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ. ಬಿಜೆಪಿಯವರು ಸಿಎಂ ವಿರುದ್ಧದ ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂದು ಬ್ರ್ಯಾಂಡ್ ಮಾಡುತ್ತಿರುವುದು ಹತಾಶ ಮನಸ್ಥಿತಿಯ ಪ್ರತೀಕ. PayCm ಅಭಿಯಾನ ಹೇಗೆ ಲಿಂಗಾಯತ ವಿರೋಧಿ ಆಗುತ್ತದೆ? ಬಿಜೆಪಿಯ ಲಾಜಿಕ್ ಏನು? ಬೊಮ್ಮಾಯಿ ವಿರುದ್ಧದ ಈ ಅಭಿಯಾನವನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ ಬಿಜೆಪಿ, ಸತ್ಯವನ್ನು ಡೈವರ್ಟ್ ಮಾಡುತ್ತಿದೆ ಎಂದು ದೂರಿದ್ದಾರೆ. ಆದರೆ ಬಿಜೆಪಿಯವರಷ್ಟು ಲಿಂಗಾಯತ ವಿರೋಧಿಗಳು ಯಾರಿದ್ದಾರೆ? ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪರನ್ನು ಸಿಎಂ ಪದವಿಯಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ್ದು, ಲಿಂಗಾಯತ ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದ್ದಾರೆ.

Edited By : Nagaraj Tulugeri
PublicNext

PublicNext

26/09/2022 06:08 pm

Cinque Terre

15.5 K

Cinque Terre

0

ಸಂಬಂಧಿತ ಸುದ್ದಿ