ಬೆಂಗಳೂರು: ನನ್ನ ಸಾವಿಗೆ ಹೆಂಡತಿ ಕಾರಣ ಅಷ್ಟೇ ಅಲ್ಲದೇ ನನ್ನ ಮಾವ ಯಮುನಪ್ಪ ಜೀವ ಬೆದರಿಕೆ ಹಾಕಿದ್ದಾರೆ. ಇದೇ ಕಾರಣಕ್ಕೆ ನಾನು ತಾನು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಡೆತ್ ನೋಟ್ ಬರೆದು ಹೆಡ್ ಕಾನ್ಸ್ಟೇಬಲ್ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಳಿಮಾವು ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ ಹುಸಗೂರು ರೈಲ್ವೇ ಗೇಟ್ ಬಳಿ ನಿನ್ನೆ ತಡರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ ಡೆತ್ ನೋಟ್ ನಲ್ಲಿ ಹೆಂಡತಿ ಹಾಗೂ ಮಾವನ ವಿರುದ್ಧ ಕಿರುಕುಳ ಆರೋಪ ಮಾಡಿದ್ದು, ಮಾವ ಯಮುನಪ್ಪ ಜೀವ ಬೆದರಿಕೆ ಹಾಕಿದ್ರು, 12ನೇ ತಾರೀಖು ಕರೆ ಮಾಡಿ ಸುಮಾರು 14 ನಿಮಿಷ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾರೆ. ನಿನ್ನೆ ಕೂಡ ಕರೆ ಮಾಡಿದಾ ನೀನು ಸತ್ತರೆ ನನ್ನ ಮಗಳು ಚೆನ್ನಾಗಿರ್ತಾಳೆ. ಅಂತ ಬೆದರಿಸಿರೋದಾಗಿ ಆರೋಪಿಸಿ ತಿಮ್ಮಪ್ಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
14/12/2024 12:25 pm