ದೊಡ್ಡಬಳ್ಳಾಪುರ: ಜನಸ್ಪಂದನ ಕಾರ್ಯಕ್ರಮದ ಆಯೋಜಕರಾದ ಚಿಕ್ಕಬಳ್ಳಾಪುರದ ಆರೋಗ್ಯ ಸಚಿವ ಡಾ.ಸುಧಾಕರ್ ಡಾ.ರಾಜಕುಮಾರ್ ರವರ ಪ್ರೇಮದಕಾಣಿಕೆ ಹಾಡು ಹಾಡುತ್ತಾ ಕಾಂಗ್ರೆಸ್ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿಚವಕುಮಾರ್ ರವರ ಮುಖ್ಯಮಂತ್ರಿ ಆಗಬೇಕು ಎಂಬ ಕನಸನ್ನು ಲೇವಡಿ ಮಾಡಿದರು..
ವೇದಿಕೆ ಮೇಲೆ ಸಚಿವ ಡಾ.ಸುದಾಕರ್ ಡಾ.ರಾಜ್ ಹಾಡನ್ನ ಹಾಡುತ್ತಾ ಸಿದ್ದರಾಮೋತ್ಸವ ಮಾಡಿ ಕನಸು ಕಾಣ್ತಿದ್ದಾರೆ. ಮತ್ತೊಬ್ಬ ನಾಯಕ ಡಿಕೆ.ಶಿವಕುಮಾರ್ ಸಹ CM.ಗಾದೆ ಮೇಲೆ ಟವಲ್ ಹಾಕಿ ಕಾಯುತ್ತಿದ್ದಾರೆ. ಕಂಡಿತವಾಗಿಯೂ ಅವರ ಕನಸು ನನಸಾಗಲ್ಲ ಎಂದು ಸಿದ್ದು ಮತ್ತು ಡಿಕೆಶಿ ರವರ ಕಾಲೆಳೆದರು. ಡಾ.ಸುಧಾಕರ್ ರವರ ಮಾತಿಗೆ ಪೂರಕವಾಗಿ ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವದ್ವಯರು ನಗೆ ಚಟಾಕಿಗೆ ಧ್ವನಿಗೂಡಿಸಿ ನಕ್ಕರು.
PublicNext
11/09/2022 10:44 am