ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಗಾ ಕುಟುಂಬದಲ್ಲಿ ಮೂವರು ಪಿಎಂಗಳಾಗಿದ್ರು ಬಡತನ ನಿರ್ಮೂಲನೆ ಆಯ್ತಾ?; ಬಿಎಸ್‌ವೈ ವಾಗ್ದಾಳಿ

ದೊಡ್ಡಬಳ್ಳಾಪುರ : ರಾಹುಲ್ ಗಾಂಧಿಯವರು ಬಡತನದ ಬಗ್ಗೆ ಮಾತನಾಡುತ್ತಾರೆ, ಅವರ ಕುಟುಂಬದಲ್ಲಿ ಮೂವರು ಪ್ರಧಾನಿಗಳಾಗಿದ್ರು ಬಡತನ ನಿರ್ಮೂಲನೆ ಆಗಿದೆಯಾ? ಎಂದು ರಾಹುಲ್ ಗಾಂಧಿ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ದೊಡ್ಡಬಳ್ಳಾಪುರದ ತಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ನಾನು ದೊಡ್ಡಬಳ್ಳಾಪುರಕ್ಕೆ ಹಲವು ಬಾರಿ ಬಂದ್ದಿದ್ದೇನೆ, ರೈತರು ಮತ್ತು ನೇಕಾರರು ನಮ್ಮ ಪಕ್ಷದ ಎರಡು ಕಣ್ಣುಗಳು, ನಾನು ಅಧಿಕಾರದಲ್ಲಿದ್ದಾಗ ನೇಕಾರರ ಸಾಲ ಮನ್ನ ಮಾಡಿದೆ, ರೈತಾಪಿ ವರ್ಗಕ್ಕೆ ಯಾವ ಸರ್ಕಾರ ನೀಡದಷ್ಟು ಕೊಡುಗೆ ನೀಡಿದ್ದೇನೆ.

ಮೊನ್ನೆ ಸಿದ್ದರಾಮಯ್ಯ ಹೇಳ್ತಾರೆ, ನಾವು ಬೆಂಗಳೂರಿನಲ್ಲಿ ಬೋಟ್ ನಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದೆ ಎಂದು, ನೀವು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಯಾವ ಪ್ರಮಾಣದಲ್ಲಿ ಮಳೆ ಬಂದಿದೆ ಎಂದು ನೀವೇ ಊಹೆ ಮಾಡಿಕೊಳ್ಳಿ, ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡ್ತಾ ಇದ್ದಿರಾ, ಮುಂದಿನ ವಿಧಾನಸಭಾ ಆಧಿವೇಶನದಲ್ಲಿ ತಕ್ಕ ಉತ್ತರ ನೀಡುವುದ್ದಾಗಿ ಹೇಳಿದರು.

Edited By : Shivu K
Kshetra Samachara

Kshetra Samachara

10/09/2022 05:52 pm

Cinque Terre

2.95 K

Cinque Terre

1

ಸಂಬಂಧಿತ ಸುದ್ದಿ