ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಸೆ ಇದೆ, ದುರಾಸೆ ಇಲ್ಲ: ಬಿಜೆಪಿಯ ಎಂಎಲ್ಎ ಆಕಾಂಕ್ಷಿ ಹುಲಹಳ್ಳಿ ಶ್ರೀನಿವಾಸ್

ಆನೇಕಲ್: ಆಸೆ ಇದೆ ದುರಾಸೆ ಇಲ್ಲ. ಯಾರು ಕೂಡ ಇಲ್ಲಿ ಸನ್ಯಾಸಿಗಳಲ್ಲ. ಪಕ್ಷ ನನಗೆ ಮತ್ತು ಹೈಕಮಾಂಡ್ ಟಿಕೆಟ್ ಕೊಟ್ರೆ ಚುನಾವಣೆಯನ್ನು ಎದುರಿಸಲು ನಾನು ಸಿದ್ದನಾಗಿದ್ದೇನೆ ಎಂದು ಬಿಜೆಪಿ ಶಾಸಕ ಸ್ಥಾನ ಆಕಾಂಕ್ಷಿ ಹುಲಹಳ್ಳಿ ಶ್ರೀನಿವಾಸ್ ಹೇಳಿದ್ದಾರೆ.

ಆನೇಕಲ್ ತಾಲೂಕಿನ ತಿಲಕ್ ಸಿದ್ಧಿ ವಿನಾಯಕ ಗೆಳೆಯರ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಗಣಪತಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು. ನಾನು ಕೂಡ ಪಕ್ಷದಲ್ಲಿ ಕಾರ್ಯಕರ್ತನಾಗಿ ದುಡಿದಿದ್ದೇನೆ. ಹೈಕಮಾಂಡ್ ಮತ್ತು ಭಾರತೀಯ ಜನತಾ ಪಾರ್ಟಿಯ ತೀರ್ಮಾನ ನಾನು ಬದ್ಧನಾಗಿರುತ್ತೇನೆ. ಆಸೆ ಇದೆ ದುರಾಸೆ ಇಲ್ಲ. ಚಿತ್ರದುರ್ಗ ಲೋಕಸಭಾ ಸದಸ್ಯರು ಮತ್ತು ಕೇಂದ್ರ ಸಚಿವರ ಆಶೀರ್ವಾದ ಮತ್ತು ಹೈಕಮಾಂಡ್ ಟಿಕೆಟ್ ಕೊಟ್ಟರೆ ಮುಂದಿನ 2023 ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಚುನಾವಣೆಯನ್ನು ಎದುರಿಸುತ್ತೇನೆ ಎಂದು ತಿಳಿಸಿದರು.

Edited By :
PublicNext

PublicNext

10/09/2022 10:11 am

Cinque Terre

38.85 K

Cinque Terre

1

ಸಂಬಂಧಿತ ಸುದ್ದಿ