ಬೆಂಗಳೂರು: ವಿನೂತನ ಚಳುವಳಿಗೆ ಹೆಸರುವಾಸಿಯಾದ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದ್ದಾರೆ. ರಾಜ್ಯದಲ್ಲಿ ಮಳೆಯಿಂದ ಅನಾಹುತವಾಗಿದ್ದು, ಬೆಂಗಳೂರು ಮಳೆಯಲ್ಲಿ ಮುಳುಗಿ ಹೋಗಿದೆ. ಬೆಂಗಳೂರು ಮಳೆಯಿಂದ ಮುಳುಗಿಹೋದ್ರು ಅಧಿಕಾರಿಗಳು ಗಮನ ಹರಿಸ್ತಿಲ್ಲ. ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರ, ಜಲಮಂಡಳಿ,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ,ವಿದ್ಯುತ್ ಸರಬರಾಜು ಕಂಪನಿ ಸೇರಿದಂತೆ ಎಲ್ಲವೂ ಮುಳುಗಿ ಹೋಗಿದೆ. ಕಾಪಾಡುವವರು ಯಾರು ಇಲ್ಲ. ಅದಕ್ಕಾಗಿ ಕಾಪಾಡಿ ಚಳುವಳಿ ಮಾಡಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ರು..
ಬೆಂಗಳೂರು ನಗರವನ್ನ ಸುಮಾರು ವರ್ಷಗಳಿಂದ ಭ್ರಷ್ಟ ರಾಜಕಾರಣಿಗಳು ಹಾಳುಮಾಡಿದ್ದಾರೆ. ಕರ್ನಾಟಕದಲ್ಲಿ ಐಟಿ- ಬಿಟಿಯವರಿಗೆ ಉದ್ಯೋಗ ಕೊಡುವುದು ಬಿಟ್ಟರೆ ಏನು ಮಾಡಿಲ್ಲ. ಮಳೆಯಿಂದ ಹಾನಿಯಾಗಿರುವ ಕರ್ನಾಟಕವನ್ನ ರಕ್ಷಿಸಿ. ಪರಿಹಾರ ಒದಗಿಸಿ ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ನಗರದ ದೇವಾಲಯದ ಮುಂದೆ ಈಡುಗಾಯಿ ಒಡೆಯಲಾಗುವುದು ಎಂದು ಹೇಳಿದ್ದಾರೆ.
PublicNext
09/09/2022 04:36 pm