ದೇವನಹಳ್ಳಿ: ಬೆಂಗಳೂರು ವಿಶ್ವಮಟ್ಟದಲ್ಲೇ ಅತ್ಯಂತ ಹೆಚ್ಚು ಅಭಿವೃದ್ಧಿ ಆಗ್ತಿರುವ ನಗರ. ಎಷ್ಟು ಅಭಿವೃದ್ಧಿ ಕೆಲಸ ಮಾಡ್ತಿದ್ರೂ ಸಾಲುತ್ತಿಲ್ಲ. ಬೆಂಗಳೂರಿಗೆ ಪ್ರತಿದಿನ ಸಾವಿರಾರು ಜನ ಬರ್ತಾರೆ. ಯಾರು ವಾಪಸ್ಸು ಹೋಗ್ತಿಲ್ಲ. ಆಂಧ್ರದವರು ಹೈದರಾಬಾದ್ ಗೆ ಬನ್ನಿ ಅಂತಾರೆ. ಹೋಗ್ತಿದ್ದಾರಾ ಎಂದು ಪ್ರಶ್ನಿಸಿದ್ರು.
ಮಾಧ್ಯಮದವರೊಂದಿಗೆ ಮಾತನಾಡಿದ ಆರ್. ಅಶೋಕ್, ಬೆಂಗಳೂರಿನಲ್ಲಿ ಕಳೆದ 20 ವರ್ಷಗಳಲ್ಲೇ ಅತ್ಯಂತ ಹೆಚ್ಚು ಮಳೆ ಆಗ್ತಿದೆ. ಒಂದ್ಕಡೆ ಮಳೆ ಅವಾಂತರ, ರಾಜಕಾಲುವೆ, ಸಮಸ್ಯೆ ನಿವಾರಿಸಿದರೆ ಮತ್ತೊಂದ್ಕಡೆ ಸಮಸ್ಯೆ ಆಗ್ತಿದೆ. ಮುಖ್ಯಮಂತ್ರಿಗಳು ಸಾವಿರಾರು ಕೋಟಿ ನಗರದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಉತ್ತರದವರು, ದಕ್ಷಿಣದವರು ಬೆಂಗಳೂರಿನ ಬಗ್ಗೆ ಕೊಂಕು ಮಾತನಾಡಿದ್ರೆ ಬೆಂಗಳೂರಿಗೆ ಏನು ಕಡಿಮೆ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮಗಳಿಗೆ ಉತ್ತರಿಸಿದರು..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
01/09/2022 06:27 pm