ಬೆಂಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಮಹದೇವಪುರ ಕ್ಷೇತ್ರದ 10 ಕ್ಕೂ ಹೆಚ್ಚು ಅಪಾರ್ಟ್ ಮೆಂಟ್‌ಗಳು ಮುಳುಗಡೆಯಾಗಿ ನಿವಾಸಿ ಸಾಕಷ್ಟು ಪರದಾಡುವಂತಾಯಿತು. ಮಳೆಯಿಂದ ಜಲಾವೃತವಾಗಿದ್ದ ಪ್ರದೇಶಗಳಿಗೆ ಪಾಲಿಕೆ, ಜಲಮಂಡಳಿ ಸೇರಿ ಆಯಾ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕ ಅರವಿಂದ ಲಿಂಬಾವಳಿ ಭೇಟಿ ಪರಿಶೀಲನೆ ನಡೆಸಿದರು.
ತೂಬರಪಾಳ್ಯದ ಬಿಇಎಂಎಲ್ ಬಡಾವಣೆ, ವೈಟ್ ಫೀಲ್ಡ್‌ನ ಡಿಎನ್ಎ ಇಂಡಸ್ ವ್ಯೂವ್ ಅಪಾರ್ಟ್ಮೆಂಟ್, ಮುನ್ನೇಕೊಳಾಲದ ಶಾಂತಿನಿಕೇತನ್ ಕಾಲೋನಿ, ಎಕೋ ಸ್ಪೇಸ್ ಬಳಿಯ ಒಆರ್ ಆರ್ ಅಪಾರ್ಟ್ ಮೆಂಟ್‌ಗಳ ನಿವಾಸಿಗಳ ಬಳಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು, ಈ ಬಾರಿ ಅತಿ ಹೆಚ್ಚಿನ ಮಳೆಯಾಗಿದ್ದು ಅದರಲ್ಲೂ ದೊಡ್ಡನೆಕ್ಕುಂದಿ ಭಾಗದಲ್ಲಿ 10 ಸೆಂಟಿಮೀಟರ್‌ಗೂ ಹೆಚ್ಚಿನ ಮಳೆಯಾಗಿದ್ದು, ಎಲ್ಲಾ ಕೆರೆಗಳು ತುಂಬಿವೆ. ಇದರಿಂದ ಹೆಚ್ಚಿನ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿವೆ. ಕೆಲವೆಡೆ ರಾಜಾಕಾಲುವೆಗಳು ಒತ್ತುವರಿಯಾಗಿರುವುದು ಇಷ್ಟೆಲ್ಲ ಅನಾಹುತಗಳಿಗೆ ಕಾರಣವಾಗಿದ್ದು ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.
PublicNext
30/08/2022 10:39 pm