ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸದಾಶಿವ ಆಯೋಗ ಅನುಷ್ಠಾನಕ್ಕೆ ಮಾದಿಗ ದಂಡೋರ ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯ ಮಾದಿಗ ದಂಡೋರ ಕಳೆದ ಇಪ್ಪತ್ತೈದು ವರ್ಷಗಳಿಂದ ಮೀಸಲಾತಿಯ ಅನುಷ್ಠಾನಕ್ಕೆ ಹೋರಾಡುತ್ತಿದೆ. ನಮ್ಮ ಮಾದಿಗ ಸಮಾಜಕ್ಕೆ ಮೀಸಲಾತಿಯ ಎಬಿಸಿಡಿ ವರ್ಗೀಕರಣ ಮಾಡಬೇಕು. ಇಪ್ಪತ್ತೈದು ವರ್ಷಗಳ ಹೋರಾಟದ ಫಲವಾಗಿ ಸದಾಶಿವ ಆಯೋಗ ವರದಿ ಸಿದ್ಧವಾಯ್ತು. ರಾಜ್ಯ ಸರ್ಕಾರ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕಿತ್ತು, ಮಾಡಿಲ್ಲ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಯಾವ ಪಕ್ಷಗಳು ಮಾದಿಗ ಜನಾಂಗಕ್ಕೆ ಅನುಕೂಲ ಬಮಾಡಿಕೊಟ್ಟಿಲ್ಲ. 2013ರ ಚುನಾವಣೆಯಾಗಲಿ. 2018ರ ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ, ನಿರಾಸೆಯಾಗಿದೆ. ಈಗ 2023ರ ಚುನಾವಣೆ ಬರ್ತಿದೆ. ಈ ಚುನಾವಣೆ ವೇಳೆಯಾದರು ಸದಾಶಿವ ಆಯೋಗದ ವರದಿ ಅನುಷ್ಠಾನ ಆಗಬೇಕು. ಇಲ್ಲವಾದರೆ ನಮ್ಮ‌ ಮಾದಿಗ ಸಮುದಾಯ ಚುನಾವಣೆಗೆ ಬಹಿಷ್ಕಾರ ಹಾಕುತ್ತದೆ. ಯಾವ ಪಕ್ಷ ನಮ್ಮ ಭಾವನೆ, ಆಶೋತ್ತರಗಳಿಗೆ ಸ್ಪಂದಿಸುತ್ತದೋ ಆ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಮಾದಿಗ ದಂಡೋರ ನಾಯಕರು ನಗರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಮಾದಿಗ ದಂಡೋರದ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದ ನಾಯಕರು ಮಾಧ್ಯಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ

Edited By :
PublicNext

PublicNext

27/08/2022 08:31 am

Cinque Terre

45.66 K

Cinque Terre

1

ಸಂಬಂಧಿತ ಸುದ್ದಿ