ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಸಿಎಂ ಬದಲಾವಣೆ ಕಪೋಲಕಲ್ಪಿತ; ಚುನಾವಣೆಯಲ್ಲಿ ನಮ್ಮ ಗೆಲುವು ಪಕ್ಕಾ"

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ. ದಿನಾ ಸುದ್ದಿಯಲ್ಲಿರಬೇಕೆಂಬುದು ಕಾಂಗ್ರೆಸ್ ನವರ ಕನಸು. ಹೀಗಾಗಿ ಇಲ್ಲಸಲ್ಲದ ವಿಚಾರ ಪ್ರಸ್ತಾಪ ಮಾಡ್ತಿದ್ದಾರೆ. ವೀರೇಂದ್ರ ಪಾಟೀಲರು ದಾಖಲೆ ಸೀಟು ಪಡೆದು ಗೆಲುವು ಸಾಧಿಸ್ತಾರೆ. ಆದ್ರೆ, ಅವರ ಆರೋಗ್ಯ ವಿಚಾರಿಸಲು ಬಂದ ಗಾಂಧಿ ಏರ್ ಪೋರ್ಟ್ ಗೆ ಹೋಗಿ ಬದಲಾವಣೆ ಚೀಟಿ ಕೊಟ್ರು!

ನಮ್ಮೆಲ್ಲರ ಸಮ್ಮತದ ಮೇಲೆ ಬೊಮ್ಮಾಯಿ ಅವರಿಗೆ ಸಿಎಂ ಸೀಟು ಕೊಡಲಾಗಿದೆ. ನಮ್ಮ ಪಕ್ಷದ ಸಿಎಂ ಬದಲಾವಣೆ ವಿಚಾರ ಚರ್ಚೆ ಮಾಡಲು ಕಾಂಗ್ರೆಸ್‌ ನವರು ಯಾವ ಸೀಮೆ ದಾಸಪ್ಪ? ಈ ವಿಚಾರ ಕಪೋಲಕಲ್ಪಿತ. ಮಾಧ್ಯಮದಲ್ಲಿ ಬರುವ ಬದಲಾವಣೆ ವಿಚಾರ ಸುದ್ದಿ ಆಗಿದ್ರೆ, ಹತ್ತು ಬಾರಿ ಬದಲಾವಣೆ ಆಗಬೇಕಿತ್ತು ಎಂದು ಸಿ.ಟಿ. ರವಿ ಹೇಳಿದ್ದಾರೆ.

ಚುನಾವಣೆಗೆ ನಿಲ್ಲಲು ಕರ್ನಾಟಕದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು. ಹತ್ತು ಜನ ಸೂಚಿಸಿದ್ರೆ ನಾಮಪತ್ರ ಸಲ್ಲಿಕೆ ಊರ್ಜಿತ ಆಗುತ್ತೆ. ಗೆಲ್ಲಿಸೋದು ಜನರ ಕೈಯಲ್ಲಿದೆ. ನಾನು ಚಿಕ್ಕಮಗಳೂರು ಜಿಲ್ಲೆಯ ಮನೆ ಮಗ. ನನ್ನನ್ನ ಗೆಲ್ಲಿಸ್ತಾರೆ ನಮ್ಮ ಜನ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ. ರಸ್ತೆ, ಆಸ್ಪತ್ರೆ, ಸ್ಟೇಡಿಯಂ ಎಲ್ಲಾ ಕೆಲಸ ಯಾರು ಅಂದ್ರೆ ಸಿ.ಟಿ. ರವಿ ಹೆಸರೇಳ್ತಾರೆ.

ಸಿದ್ದರಾಮಯ್ಯ ಅಂದ್ರೆ ದತ್ತಪೀಠಕ್ಕೆ ಅನ್ಯಾಯ ಮಾಡಿದವರು ಅಂತಾರೆ. ನಾನು ಹೇಳಿದೆ "ಸಿದ್ದರಾಮಯ್ಯ ಅವರೇ, ಅನ್ಯಾಯ ಮಾಡಬೇಡಿ. ಅದು ಹಿಂದುಗಳದ್ದು" ಅಂತ ಮನವಿ ಮಾಡಿದೆ. ಆದ್ರೂ ಕೇರ್ ಮಾಡಲಿಲ್ಲ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾವು ಐದಕ್ಕೆ ಐದೂ ಸ್ಥಾನ ಗೆಲ್ತೀವಿ ಎಂದು ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

10/08/2022 04:29 pm

Cinque Terre

31.74 K

Cinque Terre

1

ಸಂಬಂಧಿತ ಸುದ್ದಿ