ಬೆಂಗಳೂರು: ಚಾಮರಾಜ ಪೇಟೆ ಆಟದ ಮೈದಾನ ಕಂದಾಯ ಇಲಾಖೆಯ ಸೊತ್ತು ಎಂದು ಘೋಷಣೆಯಾಗಿದೆ. ಆದರೂ ವಿವಾದ ಮಾತ್ರ ಬಗೆಹರಿಯುತ್ತಿಲ್ಲ. ಹೊಸದಾಗಿ ಧಾರ್ಮಿಕ ಹಬ್ಬಗಳ ಆಚರಣೆ ಮಾಡಬೇಕೋ ಅಥವಾ ಬೇಡವೋ ಎಂಬ ವಿವಾದ ತೀವ್ರ ಸ್ವರೂಪ ಪಡೆದುಕೊಳ್ತಿದೆ.
ಚಾಮರಾಜ ಪೇಟೆ ನಾಗರೀಕರ ಒಕ್ಕೂಟ ಗಣೇಶ ಮತ್ತು ಗೌರಿ ಹಬ್ಬ ಆಚರಣೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಡೆಸಲು ಮುಂದಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂಬುದು ಮುಸ್ಲಿಂ ಸಂಘಟನೆ ವಾದವಾಗಿದೆ.
ಹೀಗಾಗಿ ಮತ್ತೆ ಧರ್ಮಗಳ ನಡುವೆ ಬೂದಿ ಮುಚ್ಚಿದ ಕೆಂಡಂತಹ ಸ್ಥಿತಿ ನಿರ್ಮಾಣವಾಗಿದ್ದು, ಹಬ್ಬದ ದಂಗಲ್ ಚಾಮರಾಜ ಪೇಟೆ ಸೃಷ್ಟಿಯಾಗಿದೆ. ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಗಣೇಶ ಹಬ್ಬದ ಆಚರಣೆಗೆ ಅನುಮತಿಗಾಗಿ ಯಾರೂ ಅರ್ಜಿ ಸಲ್ಲಿಸಿಲ್ಲ. ಸಲ್ಲಿಕೆಯಾದ ಬಳಿಕ ಚರ್ಚೆ ನಡೆಸಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PublicNext
09/08/2022 11:03 am