ಬೆಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ಸೋಗಲಾಡಿ ಸಿದ್ಧಸೂತ್ರನ ಕೊಡುಗೆ ಏನು ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಹೆಚ್.ಸಿ ಮಹಾದೇವಪ್ಪ ಆಕ್ರೋಶ ಹೊರಹಾಕಿದ್ದಾರೆ. ಇವರಿಗೆ ಜನಪರವಾದ ಹೋರಾಟದ ಹಾದಿಗಿಂತ, ಮತ್ತೊಬ್ಬರನ್ನು ಟೀಕಿಸಿದರೆ ಮತ ಕ್ರೋಢೀಕರಣ ಆಗುತ್ತದೆ ಎಂಬ ಭ್ರಮೆಯೇ ಹೆಚ್ಚು. ಕೆಲವೊಮ್ಮೆ ಅರ್ಥವಿಲ್ಲದ ಸಾರ್ವಜನಿಕ ಬದುಕಿಗೆ ನಿರ್ಲಕ್ಷ್ಯವೇ ಒಳಿತು ಎಂದು ಟ್ವೀಟ್ ಮೂಲಕ ಸಿದ್ದು ಆಪ್ತ ಮಹಾದೇವಪ್ಪ ಕಿಡಿಕಾರಿದ್ದಾರೆ.
Kshetra Samachara
08/08/2022 07:55 pm