ಬೆಂಗಳೂರು: ಇಂದು ವಿಧಾನಸೌಧದಲ್ಲಿ ರಾಮಲಿಂಗರೆಡ್ಡಿ ಮೀಸಲಾತಿ ಸಂಭಂದಿಸಿದ ವಿಚಾರಕ್ಕೆ ಅಸಾಮಾಧಾನ ಹೊರಹಾಕಿದ್ದಾರೆ. ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಅದು ಸರಿಯಾಗಿಲ್ಲ ಮನಸ್ಸಿಗೆ ಬಂದಂತೆ ಮಾಡಿದ್ದಾರೆ ಎಂದರು. ಡಿಲಿಮಿಟೇಷನ್ ಕಂದಾಯ ಇಲಾಖೆ ಮಾಡಬೇಕಿತ್ತು, ಆದ್ರೆ ಆರ್.ಎಸ್.ಎಸ್. ಬಿಜೆಪಿ ನಾಯಕರು ಡಿಲಿಮಿಟೇಷನ್ ಮಾಡಿದ್ದಾರೆ. 3.5 ಸಾವಿರ ಅಬ್ಜೆಕ್ಷನ್ ಬಂದಿತ್ತು ಅದನ್ನು ಕ್ಯಾರೆ ಅಂದಿಲ್ಲ.
ನಮ್ಮ ಪಕ್ಷದ ಕಾರ್ಪೋರೇಟರ್ ನಿಲ್ಲದ ಹಾಗೆ ಮಾಡಿ ಮಹಿಳೆಯರಿಗೂ ಕಾಂಗ್ರೆಸ್ ಶಾಸಕರ ಕ್ಷೇತ್ರದಲ್ಲಿ100% ಮೀಸಲಾತಿ ನೀಡಿದ್ದಾರೆ. ಓಬಿಸಿ ಮೀಸಲಾತಿ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಹಾಕಿದ್ದಾರೆ. ಇದೊಂದು ವ್ಯವಸ್ಥಿತವಾಗಿ ಮಾಡಿರೋ ಅನ್ಯಾಯ, ಅಕ್ರಮ ಇದು ಕಾನೂನುಬಾಹಿರವಾಗಿ ಮಾಡಲಾದ ಮೀಸಲಾತಿ ಎಂದು ಕಿಡಿಕಾರಿದ್ದಾರೆ.
UD ಕಚೇರಿ RSS ಕಚೇರಿ ಆಗಿದೆ. RSS ಹೇಳಿದಂತೆ ಮೀಸಲಾತಿ ಮಾಡಿದ್ದಾರೆ. ಕೂಡಲೇ ಮೀಸಲಾತಿ ಸರಿಮಾಡಿ ಇಲ್ಲವಾದಲ್ಲಿ ಸೋಮವಾರ ಸಿಎಂ ಮನೆಗೆ ಮುತ್ತಿಗೆ ಹಾಕುವುದಾಗಿ ಶಾಸಕ ರಾಮಲಿಂಗರೆಡ್ಡಿ ಹೇಳಿದ್ದಾರೆ.
Kshetra Samachara
05/08/2022 06:45 pm