ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಆಮ್ ಆದ್ಮಿ' ಆದ ಹಾಸ್ಯ ನಟ ಟೆನ್ನಿಸ್ ಕೃಷ್ಣ; ಪಕ್ಷದಿಂದ ಭರ್ಜರಿ ಸ್ವಾಗತ

ವರದಿ- ಗೀತಾಂಜಲಿ

ಬೆಂಗಳೂರು: ಆಮ್ ಆದ್ಮಿ ಪಕ್ಷಕ್ಕೆ ಕನ್ನಡ ಚಿತ್ರರಂಗದ ಹಾಸ್ಯ ನಟ ಟೆನ್ನಿಸ್ ಕೃಷ್ಣ ಸೇರ್ಪಡೆಯಾಗಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷರಾದ ಪೃಥ್ವಿರೆಡ್ಡಿ, ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಸಮಾರಂಭದಲ್ಲಿ ಆಪ್ ಅಧ್ಯಕ್ಷ ಪೃಥ್ವಿ ರೆಡ್ಡಿ, ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ , ಮಥಾಯಿ, ಪುರುಷೋತ್ತಮ್ , ಜಗದೀಶ್ ಸದಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಟೆನಿಸ್ ಕೃಷ್ಣ್, ಪ್ರಸ್ತುತ ಸನ್ನಿವೇಶಗಳು ಜನಸಾಮಾನ್ಯರ ಪರವಿಲ್ಲ. ಆದರೆ ಆಪ್ ಪಕ್ಷ ಜನರ ಪರವಾಗಿದೆ. ದೆಹಲಿಯಲ್ಲಿ 2ನೇ ಬಾರಿಗೆ ಅರವಿಂದ ಕೇಜ್ರಿವಾಲ್ ಆಡಳಿತ ಗಮನಿಸಿದ್ದೇ, ಜೊತೆಗೆ ಆಪ್ ಆದರ್ಶಗಳನ್ನ ನೋಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.

ಇನ್ನು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಸೇರಿದಂತೆ ನಾಡಿಗೆ ಒಳಿತಾಗುವ ನಿಟ್ಟಿನಲ್ಲಿ ಕೆಲಸ ಮಾಡ್ತೀನಿ. ಈ ಪಕ್ಷದಲ್ಲಿ ನಾನು ಯಾವುದೇ ಷರತ್ತು ಹಾಕಿಲ್ಲ ನಾನು ರೈತ ಚಳುವಳಿ ಮಾಡಿಕೊಂಡು ಬಂದಿದ್ದೇನೆ. ಮುಂಬರುವ ದಿನಗಳಲ್ಲಿ ಈ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಟೆನ್ನಿಸ್ ಕೃಷ್ಣ ತಿಳಿಸಿದ್ದಾರೆ.

Edited By : Manjunath H D
PublicNext

PublicNext

04/08/2022 04:16 pm

Cinque Terre

21.69 K

Cinque Terre

0

ಸಂಬಂಧಿತ ಸುದ್ದಿ