ಬೆಂಗಳೂರು: ಗ್ರಾಮಾಂತರ ಭಾಗದಲ್ಲಿ ಪಕ್ಷದ ಬೆಳವಣಿಗೆಗಾಗಿ ಗೆಲ್ಲಲು ಬಿಜೆಪಿ ಪಕ್ಷ 3ನೇ ವರ್ಷದ ಸಾಧನಾ ಸಮಾವೇಶವನ್ನು ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದೆ. ಇನ್ನು ಮಿಷನ್ 150ಅಡಿ ಬಿಜೆಪಿ 50 ವಿಧಾನಸಭಾ ಕ್ಷೇತ್ರ ಗುರ್ತಿಸಿದ್ದೇವೆ. ಅದರಲ್ಲಿ ದೊಡ್ಡಬಳ್ಳಾಪುರ ಪ್ರಮುಖವಾದದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ತಿಳಿಸಿದರು. ಇನ್ನು ಕಾಂಗ್ರೆಸ್ನವರು CM ವಿಚಾರವಾಗಿ ಬೀದಿ ಕಾಳಗಕ್ಕಿಳಿದಿದ್ದಾರೆ.
ಹುಡುಗಿ ಹುಡ್ಕಿಲ್ಲ, ಎಂಗೇಜ್ಮೆಂಟ್ ಆಗಲಿಲ್ಲ, ಮದುವೆ ಆಗ್ಲಿಲ್ಲ, ಶ್ರೀಮಂತ ಆಗ್ಲಿಲ್ಲ, ಎಲ್ ಕೆಜಿ ಕ್ಲಾಸ್ ಸೀಟ್ ಹುಡುಕಲು ಹೋಗಿದ್ದಾರೆ ಎಂದು ವ್ಯಂಗ್ಯಮಾಡಿದರು.
ಸಿದ್ದಾರಾಮೋತ್ಸವದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಬೀದಿ ಕಾಳಗ ಹೆಚ್ಚಾಗಲಿದೆ. ಸಿಎಂ ಸ್ಥಾನಕ್ಕೆ ಕೇವಲ ಸಿದ್ದರಾಮಯ್ಯ & ಡಿಕೆಶಿ ಮಾತ್ರವಲ್ಲ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಇದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ಕಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
PublicNext
26/07/2022 08:47 am