ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈಶ್ವರಪ್ಪಗೆ ನೀಡಿದ್ದ ಕ್ಲೀನ್ ಚಿಟ್‌ಗೆ ತೀವ್ರ ಖಂಡನೆ

ವರದಿ- ಗೀತಾಂಜಲಿ

ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ್ ಸೂಸೈಡ್ ಸಂಬಂಧಿಸಿದಂತೆ ಮಾಜಿ ಸಚಿವ ಈಶ್ವರಪ್ಪನವರಿಗೆ ನೀಡಿದ್ದ ಕ್ಲೀನ್ ಚೀಟ್ ನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸಿದೆ. ಈ ಪ್ರಕರಣದಲ್ಲಿ ಈಶ್ವರಪ್ಪ ಪ್ರಮುಖ ಆರೋಪಿಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಂತೋಷ್ ಈಶ್ವರಪ್ಪನವರ ವಿರುದ್ಧ ವಾಟ್ಸಪ್‌ನಲ್ಲಿ ಡೆತ್‌ನೋಟ್‌ ಕಳುಹಿಸಿರುವುದನ್ನು ಪೊಲೀಸರೇ ದೃಢಪಡಿಸಿದ್ದಾರೆ. ಆದರೂ ವಿಚಾರಣೆಯನ್ನೂ ನಡೆಸದೇ ಕ್ಲೀನ್‌ ಚಿಟ್‌ ನೀಡಿರುವುದು ಖಂಡನೀಯ. ಸರಿಯಾಗಿ ವಿಚಾರಣೆ ಮಾಡಿ. ಅಲ್ಲದೇ ಆರ್‌ಡಿಪಿಆರ್‌ ಹಗರಣ ಕುರಿತು ಸೂಕ್ತ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ತೀವ್ರ ರೀತಿ ಹೋರಾಟ ಮಾಡುತ್ತೇವೆಂದು ಎಎಪಿ ಮುಖಂಡ ಬಿ.ಟಿ.ನಾಗಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
PublicNext

PublicNext

21/07/2022 05:20 pm

Cinque Terre

28.72 K

Cinque Terre

0

ಸಂಬಂಧಿತ ಸುದ್ದಿ