ಬೆಂಗಳೂರು: ಖಾಯಂ ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಳೆದ ಮೂರು ದಿನಗಳಿಂದ ಹೋರಾಟ ಮಾಡುತ್ತಿದ್ದ ಪೌರಕಾರ್ಮಿಕರು ಇಂದು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಪ್ರತಿಭಟನಾಕಾರರ ಬೇಡಿಕೆಗಳನ್ನ ಈಡೇರಿಸುವ ಬಗ್ಗೆ ಪತ್ರದ ಮೂಲಕ ಸರ್ಕಾರ ಭರವಸೆ ನೀಡಿದೆ. ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಸಫಾಯಿ ಕರ್ಮಚಾರಿ ನಿಯೋಗದ ಅಧ್ಯಕ್ಷ ಶಿವಣ್ಣ ಬಂದು ಭರವಸೆ ಪತ್ರ ನೀಡಿದರು.
Kshetra Samachara
04/07/2022 10:07 pm