ಬೆಂಗಳೂರು : ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ನಯ್ಯ ಲಾಲ್ ರವರ ಹತ್ಯೆ ಖಂಡಿಸಿ ದೇಶಾದ್ಯಂತ ತೀವ್ರ ಆಕ್ರೋಶ ಹೆಚ್ಚಾಗುತ್ತಿದೆ.
ಜಿಹಾದಿ ಮಾನಸಿಕತೆಯೇ ಈ ಹತ್ಯೆಗೆ ಕಾರಣ. ನೂಪುರ್ ಶರ್ಮ ಅವರ ಹೇಳಿಕೆ ಬೆಂಬಲಿಸಿ ಪೋಸ್ಟ್ ಮಾಡಿದ್ದ ಸಂಬಂಧ ಪೊಲೀಸರು ಕನ್ನಯ್ಯ ಲಾಲ್ ಅವರನ್ನು ಠಾಣೆಗೆ ಕರೆಸಿದ್ದರು. ನಂತರ ಕನ್ನಯ್ಯ ತಮಗೆ ಜೀವ ಬೆದರಿಕೆ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಆದರೂ ಅವರಿಗೆ ಪೊಲೀಸರು ರಕ್ಷಣೆ ನೀಡಿಲ್ಲ. ಆದ್ದರಿಂದ ಈ ಹತ್ಯೆ ಹಿಂದೆ ರಾಜಸ್ತಾನ ಪೊಲೀಸರ ವೈಫಲ್ಯ & ಅಲ್ಲಿನ ಕಾಂಗ್ರೆಸ್ ಸರ್ಕಾರದ ವಿಫಲತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿನ ಬೆಂಬಲಿಸಿ ಪೋಷಿಸುತ್ತದೆ . ಕಾಂಗ್ರೆಸ್ ಪಕ್ಷ ಎಲ್ಲೇ ಅಧಿಕಾರದಲ್ಲಿ ಇದ್ದರೂ ಅದು ಹಿಂದೂಗಳ ವಿರುದ್ಧ ಒಳಸಂಚು ಷಡ್ಯಂತ್ರ ಮಾಡುತ್ತಾ ಬಂದಿದೆ.
ದೇಶದಲ್ಲಿ ಹೆಚ್ಚುತ್ತಿರುವ ಜಿಹಾದಿ ಮಾನಸಿಕತೆಯ ವಿರುದ್ಧ ಮತ್ತು ಇಂಥ ಕೊಲೆಗಳ ಬಗ್ಗೆ ಕಾಂಗ್ರೆಸ್ಸಿಗರು ಬುದ್ಧಿಜೀವಿಗಳ ಮೌನ ಯಾಕೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ತಮ್ಮ ಅಸಮಾಧಾನ ಹೊರಹಾಕಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಮಟ್ಟದ ಪತ್ರಿಕಾಗೋಷ್ಠಿಲಿ ಮಾಜಿ ಶಾಸಕ ಚಂದ್ರಣ್ಣ , ತಾಲ್ಲೂಕು ಅಧ್ಯಕ್ಷ ಸುಂದರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಮತ್ತಿತರರ ನಾಯಕರಿದ್ದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
Kshetra Samachara
30/06/2022 10:37 pm