ಬೆಂಗಳೂರು-ಚಾಮರಾಜಪೇಟೆಯ ಈದ್ಗಾ ಮೈದಾನ ತಮ್ಮ ಸ್ವತ್ತಲ್ಲ ಎಂದಿರುವ ಬಿಬಿಎಂಪಿ ಆಯುಕ್ತರ ನಡೆ ಖಂಡಿಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ , ಬಿಬಿಎಂಪಿ ಗೆ ಐತಿಹಾಸಿಕ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ.
ನಗರದಲ್ಲಿಂದು ಬಿಬಿಎಂಪಿ ವಿಶೇಷ ಆಯುಕ್ತ (ಆಸ್ತಿಗಳ ವಿಭಾಗ) ರಾಮ್ ಪ್ರಸಾತ್ ಮನೋಹರ್ ಅವರಿಗೆ ದಾಖಲೆಗಳನ್ನು ನೀಡಿ ಅದು ವಕ್ಫ್ ಬೋರ್ಡ್ ಆಸ್ತಿವಲ್ಲ. ಅಷ್ಟೇ ಅಲ್ಲದೆ, ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಅವರಂತಹ ರಾಜಕಾರಣಿಗಳ ಪ್ರಭಾವಗಳಿಗೆ ಒಳಗಾಗಿ ಈ ಪಾಲಿಕೆಯ ಅಮೂಲ್ಯ ಸ್ವತ್ತನ್ನು ವಕ್ಫ್ ಬೋರ್ಡ್ ಹೆಸರಿಗೆ ಖಾತಾ ಮಾಡಿಕೊಡಲು ತಾವು ಮುಂದಾದಲ್ಲಿ ತಮ್ಮ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಅವರು, 1964 ರಿಂದ ಈ ಮೈದಾನದಲ್ಲಿ ಮಹಾಪೌರಾರು ಪೌರಾತ್ವ ಸ್ವೀಕರಿಸಿರುವ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಇಲ್ಲಿ ಏರ್ಪಡಿಸಲಾಗಿದೆ. ಇಲ್ಲಿ ಯಾವುದೇ ತರಹದ ಕಟ್ಟಡ ಅಥವಾ ಗೋಡೆ (ಈದ್ಗಾ) ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ಮೈದಾನವು ವಕ್ಫ್ ಬೋರ್ಡ್ ಗೆ ಸೇರಿದ್ದು ಎಂಬುದಕ್ಕೆ ಯಾವುದೇ ದಾಖಲೆಗಳು ಇರುವುದಿಲ್ಲ ಮತ್ತು ತಮಗೆ ಶಾಸಕರು ನೀಡಿರುವ ದಾಖಲೆಗಳು ಕೇವಲ ಸೃಷ್ಟಿಸಲ್ಪಟ್ಟ ದಾಖಲೆಗಳೇ ಹೊರತು ಅದು ನ್ಯಾಯಯುತವಾದ ದಾಖಲೆಗಳಲ್ಲ ಎಂದು ಆರೋಪಿಸಿದರು.
ಪ್ರಸ್ತುತ ಸುಮಾರು 150 ಕೋಟಿ ರೂಪಾಯಿಗಳಿಗೂ ಹೆಚ್ಚು ಅಧಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಈ ಮೈದಾನ ಪಾಲಿಕೆಯದ್ದೇ ಎಂಬುದಕ್ಕೆ ಸಾಕಷ್ಟು ದಾಖಲೆ, ಪುರಾವೆಗಳನ್ನು ವಿವರಗಳನ್ನು ಈ ಪತ್ರದೊಂದಿಗೆ ನೀಡಲಾಗಿದೆ.
ಆದರೆ, ಅತ್ಯಮೂಲ್ಯ ಪಾಲಿಕೆಯ ಸ್ವತ್ತನ್ನು ರಕ್ಷಿಸಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಹೊಂದಿರುವ ಆಯುಕ್ತರು, ಒಬ್ಬ ಶಾಸಕರು ನೀಡಿದ ಕೆಲವೇ ಪುಟಗಳ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸದೆಯೇ ಏಕಾಏಕಿ ಅದು ಪಾಲಿಕೆಯ ಸ್ವತ್ತಲ್ಲ ವಕ್ಫ್ ಬೋರ್ಡ್ ನ ಸ್ವತ್ತು ಎಂಬ ನಿರ್ಧಾರ ತಳೆದಿರುವುದು ತಮ್ಮ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದರು.
Kshetra Samachara
28/06/2022 04:38 pm