ದೇವನಹಳ್ಳಿ: ರಾಷ್ಟ್ರೀಯ ಮಟ್ಟದ 3 ದಿನಗಳ OBC ಘಟಕದ ಪ್ರಶಿಕ್ಷಣ ಶಿಬಿರ ಯಲಹಂಕದ ರಾಜಾನುಕುಂಟೆ ಬಳಿ ನಡೆಯುತ್ತಿದೆ. ಇಂದು ಶಿಬಿರದ ಮೂರನೆ ದಿನದ ಸಮಾರೋಪ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಾಕ್ಷಿಯಾಗಲಿದ್ದಾರೆ. ಸದ್ಯ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ರಾಜಾನುಕುಂಟೆಯತ್ತ ತೆರಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ಜೆ.ಪಿ.ನಡ್ಡಾ ರನ್ನು ಸ್ವಾಗತಿಸಿದರು. ವಿಸ್ತಾರ ವಿಮಾನದಲ್ಲಿ ಕೆಐಎಗೆ ಆಗಮಿಸುತ್ತಿದ್ದಂತೆ ವಿಐಪಿ ಟರ್ಮಿನಲ್ ನಲ್ಲಿ ನಡ್ಡಾಗೆ ಸ್ವಾಗತ ಕೋರಿದ ಸಿಎಂ ಬೊಮ್ಮಾಯಿ, ಜೊತೆ ಸಿಟಿ ರವಿ ಮತ್ತು ನಳಿನ್ ಕುಮಾರ್ ಕಟೀಲ್ ಮಾತುಕತೆ ನಡೆಸಿದರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ..
PublicNext
18/06/2022 12:47 pm