ಬೆಂಗಳೂರು: ಇದು ಸನ್ಮಾನ ಮಾಡಿಸಿಕೊಳ್ಳುವ ಸಮಯವಲ್ಲ. ಇದು ಸಂಘರ್ಷದ ಸಮಯ ಎಂದು ಹೊಸಕೋಟೆಯಲ್ಲಿ ಸಿ.ಎಂ.ಮುಂಬರುವ ಚುನಾವಣೆಗೆ ರಣಕಹಳೆ ಊದಿದರು. 2023ರ ಚುನಾವಣೆಲಿ ದಣಿವರಿಯದೇ ನಿರಂತರವಾಗಿ ಕೆಲಸ ಮಾಡಿ, ಪಕ್ಷವನ್ನು ಸಂಘಟಿಸಿ, ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತದಾರರ ಒಲವನ್ನು ಪಡೆದುಕೊಳ್ಳಲು ಪೂರ್ಣ ಪ್ರಮಾಣದ ಪ್ರಯತ್ನ ಪ್ರಾರಂಭ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಬದಲಾವಣೆಯ ಗಾಳಿ ಬೀಸಬೇಕಿದೆ. ಎಂಟಿಬಿ ನಾಗರಾಜ್ ಕೊಡುಗೈ ದಾನಿ. ಹೊಸಕೋಟೇಲಿ ಸಂಘರ್ಷದ ರಾಜಕಾರಣ ನಡೆಯುತ್ತಿದೆ. ಈ ಜನಸಾಗರ ನೋಡುತ್ತಿದ್ದರೆ ಬರುವ ಚುನಾವಣೇಲೊ ಎಂಟಿಬಿ ಗೆಲುವು ಖಚಿತವಾಗಿತ್ತಿದೆ ಎಂದರು. ಸಂಸದ ಹಾಗೂ ಶಾಸಕ ಆಗುವುದಲ್ಲ ಮುಖ್ಯ ಜನರ ಮನಸ್ಸನ್ನ ಗೆಲ್ಲಬೇಕು. ಅದನ್ನ ಎಂಟಿಬಿ ಮಾಡಿ ಮುಗಿಸಿದ್ದಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಶಾಸಕ ಶರತ್ ಬಚ್ಚೇಗೌಡ ಮತ್ತು ಚಿಕ್ಕಬಳ್ಳಾಪುರ ಸಂಸದ ಬಿ.ಎನ್ ಬಚ್ಚೇಗೌಡರಿಗೆ ಸಖತ್ತಾಗಿ ಟಾಂಗ್ ನೀಡಿದರು.
ಮುಂಬರುವ 2023ರ ಚುನಾವಣೆಗೆ ಈಗಿನಿಂದಲೇ ಎಲ್ಲಾ ಪಕ್ಷಗಳು ಚುನಾವಣಾಎಯ ರಹಕಹಳೆ ಊದುತ್ತಿವೆ. ಅಂತು ಬಚ್ಚೇಗೌಡ ಕುಟುಂಬ ಹಾಗೂ ಎಂಟಿಬಿ ಕುಟುಂಬಗಳ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಹೊಸಕೋಟೆ ಚುನಾವಣಾ ಯುದ್ಧಭೂಮಿ ಆಗುವುದರಲ್ಲಿ ಅನುಮಾನವೇ ಇಲ್ಲ.
SureshBabu Public Next ಹೊಸಕೋಟೆ..
PublicNext
07/06/2022 06:00 pm