ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಗ್ರಾಮಸಭೆ ಬಹಿಷ್ಕಾರ: ಚುನಾಯಿತ ಪ್ರತಿನಿಧಿಗಳು ಫುಲ್ ಗರಂ!

ಆನೇಕಲ್ : ಸಾರ್ವಜನಿಕರ ಕುಂದು ಕೊರತೆಗಳನ್ನು ನೀಗಿಸಲು ಗ್ರಾಮಸಭೆಗಳನ್ನು ಸರ್ಕಾರ ನಡೆಸುತ್ತಾ ಬಂದಿದೆ. ಆದರೆ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ಬಹಿಷ್ಕಾರ ಮಾಡಿರುವ ಘಟನೆ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು ಇಂದು 2022ನೇ ಮೊದಲೇ ಸಾಲಿನ ಗ್ರಾಮಸಭೆ ಸಮಂದೂರು ಗ್ರಾಮಪಂಚಾಯಿತಿ ಭಾಗದಲ್ಲಿ ಏರ್ಪಡಿಸಲಾಗಿತ್ತು. ಆದರೆ 24 ಇಲಾಖೆ ಅಧಿಕಾರಿಗಳು ಭಾಗಿ ಆಗಬೇಕಿದ್ದ ಕಾರ್ಯಕ್ರಮಕ್ಕೆ ಕೇವಲ 12 ಇಲಾಖೆ ಅಧಿಕಾರಿಗಳು ಹಾಜರಾಗಿದ್ದರು. ಹೀಗಾಗಿ ಚುನಾಯಿತ ಪ್ರತಿನಿಧಿಗಳು ಗ್ರಾಮ ಸಭೆಯನ್ನು ಬಹಿಷ್ಕಾರಿಸಿದ್ದಾರೆ. ಇದರಿಂದಾಗಿ ಕೆಲ ಗಂಟೆಗಳ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಗ್ರಾಮ ಸಭೆ ಸರಿಯಾಗಿ ನಡೆಯದಿರಲೂ ಕಾರಣ ಸಮಂದೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಹಿತಿ ನೀಡದೆ ಇರುವುದು ,ಹೀಗಾಗಿ ಇಂದು ಗ್ರಾಮ ಸಭೆ ಇದ್ದು ಅದರ ಹಿಂದಿನ ದಿನ ಮಾಹಿತಿ ನೀಡುವುದು ಎಷ್ಟು ಸರಿ ಎಂದು ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷರ ವಿರುದ್ದ ಗರಂ ಆಗಿದ್ದಾರೆ.

ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Nagesh Gaonkar
PublicNext

PublicNext

30/05/2022 10:35 pm

Cinque Terre

33.44 K

Cinque Terre

0

ಸಂಬಂಧಿತ ಸುದ್ದಿ