ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕೆಂಪೇಗೌಡರ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ಜಾಗ ಕೊಡುವಂತೆ ಆನೇಕಲ್ ಶಾಸಕ ಶಿವಣ್ಣನವರಿಗೆ ಒಕ್ಕಲಿಗರ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದಾರೆ
1603 ರಲ್ಲಿಯೇ ಕೆಂಪೇಗೌಡರ ವಂಶಸ್ಥರಾದ ಚಿಕ್ಕ ತಿಮ್ಮೇಗೌಡರು ಆನೇಕಲ್ ಪಾಳೆ ಪಟ್ಟನ್ನು ನಿರ್ಮಾಣಮಾಡಿದ್ದು ಜೊತೆಗೆ ಆನೇಕಲ್ ನಗರ ಪ್ರದೇಶದಲ್ಲಿ ಹಲವಾರು ದೇವಾಲಯಗಳನ್ನು. ಕೋಟೆ ಕಂದಕಗಳನ್ನು, ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿರುವ ಕುರುಹುಗಳು ಈಗಲು ಕಾಣಿಸುತ್ತದೆ, ಆನೇಕಲ್ ತಾಲ್ಲೂಕಿನಲ್ಲಿ 50 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಮತದಾರರಿದ್ದು, ಕೆಂಪೇಗೌಡರ ಇತಿಹಾಸವನ್ನು ಜನರಿಗೆ ಮತ್ತಷ್ಠು ತಿಳಿಸುವ ಮತ್ತು ಒಕ್ಕಲಿಗ ಸಮುದಾಯ ಒಗ್ಗಟ್ಟಾಗುವ ಉದ್ದೇಶದಿಂದ ಆನೇಕಲ್ ಪಟ್ಟಣದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಜಾಗವನ್ನು ಕೊಡಿಸಿಕೊಡಬೇಕು ಎಂದು ಒಕ್ಕಲಿಗರ ಸಂಘ ಆನೇಕಲ್ ತಾಲ್ಲೂಕು ವಿಧಾನ ಸಭಾ ಕ್ಷೇತ್ರದ ಪದಾದಿಕಾರಿಗಳು ಮತ್ತು ಒಕ್ಕಲಿಗ ಸಮುದಾಯ ಮುಖಂಡರು ಶಾಸಕ ಶಿವಣ್ಣ ಗೆ ಮನವಿ ಪತ್ರ ನೀಡಿದರು.
ಇನ್ನು ಸ್ಥಳದಲ್ಲಿ ಒಕ್ಕಲಿಗರ ಸಂಘ ಆನೇಕಲ್ ತಾಲ್ಲೂಕು ವಿಧಾನ ಸಭಾ ಕ್ಷೇತ್ರದ ಪದಾದಿಕಾರಿಗಳು ಮತ್ತು ಒಕ್ಕಲಿಗ ಸಮುದಾಯದ ಮುಖಂಡರು ಭಾಗವಹಿಸಿದ್ದರು.
Kshetra Samachara
28/05/2022 08:54 pm