ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮ ನಡೆದಿದ್ದರ ಬಗ್ಗೆ ನೊಂದ ಅಭ್ಯರ್ಥಿಗಳು ನನ್ನ ಬಳಿ ಬಂದಿದ್ದರು. ಅವರೆಲ್ಲ ಕಲಬುರ್ಗಿ ಭಾಗದವರು ಆಗಿದ್ದರಿಂದ ನಾನೇ ಅವರನ್ನು ಪ್ರಿಯಾಂಕ್ ಖರ್ಗೆ ಬಳಿ ಕಳುಹಿಸಿದ್ದೆ. ಆದ್ರೆ ಮಾಹಿತಿ ನೀಡಿದವರಿಗೆ ಈಗ ನೋಟಿಸ್ ಕೊಡ್ತೀರಾ? ಅಕ್ರಮದ ಬಗ್ಗೆ ಮಾತನಾಡಿದವರನ್ನ, ದಾಖಲೆ ಕೊಟ್ಟವರನ್ನೇ ಹೆದರಿಸ್ತೀರಾ? ಇವೆಲ್ಲ ನಮ್ಮತ್ರ ನಡೆಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರದ ಮೇಲೆ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗದಂತೆ ಪ್ರಿಯಾಂಕ್ ಖರ್ಗೆ ಅವರಿಗೆ ಹೇಳಿದ್ದೇವೆ. ಬೇಕಾದರೆ ಅವರೇ ಬರಲಿ. ಆರೋಪಿ ಜೊತೆಗೆ ಗೃಹ ಸಚಿವರು ಇರುವ ಫೋಟೋಗಳು ಹರಿದಾಡುತ್ತಿವೆ. ಇನ್ನೂ ಹಲವು ಸಚಿವರ ಜೊತೆ ನಿಂತಿರುವ ಫೋಟೋಗಳು ಇವೆ. ಇದರಲ್ಲಿ ಆರೋಪಿ ಭ್ರಷ್ಟಾಚಾರದ ಅಂಗಡಿಯನ್ನೇ ತೆರೆದಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳದೇ ನಮ್ಮ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಮೊದಲು ಈ ಬಗ್ಗೆ ವಿಚಾರಣೆ ಆಗಲಿ ಆ ನಂತರ ಮಾತಾಡ್ತೀವಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
PublicNext
25/04/2022 09:24 pm