ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಎದುರಿಸುವ ಸಲುವಾಗಿ ಈಗಿನಿಂದಲೇ ಪಕ್ಷವನ್ನು ಬಲಪಡಿಸುವ ಸಲುವಾಗಿ ಬಿಜೆಪಿ ಪ್ರಭಾವಿ ಎಂಎಲ್ಎ ಆಕಾಂಕ್ಷಿ ಶ್ರೀನಿವಾಸ್, ಹಿರಿಯ ಬಿಜೆಪಿ ಸಂಘಟನೆಯ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ
ಇಲ್ಲಿನ ಹುಸ್ಕೂರು ಗ್ರಾಮದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಹಿರಿಯ ಕಾರ್ಯಕರ್ತರ ಮನೆಗೆ ಮನೆಗೆ ತೆರಳಿ ಸೌಹಾರ್ದ ಮಾತುಕತೆಯನ್ನು ಮಾಡಿಸಿದ್ದಾರೆ. ಇನ್ನು ಪಕ್ಷದ ಹಿರಿಯರ ಜೊತೆಗೆ ಬಿಜೆಪಿ ಬಲವರ್ಧನೆಗೆ ಇನ್ನಷ್ಟು ಕೆಲಸ ಮಾಡಬೇಕಾಗಿದೆ. ಜತಗೆ
ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದೇ ಬಿಜೆಪಿ ಕಾರ್ಯಕರ್ತರ ಮೂಲ ಕರ್ತವ್ಯ ಜವಾಬ್ದಾರಿ ಎಂದು ಶ್ರೀನಿವಾಸ್ ತಿಳಿಸಿದರು.
Kshetra Samachara
16/04/2022 09:32 pm