ಹೊಸಕೋಟೆ: ಕಮಿಷನ್ ದಂಧೆ ಎಲ್ಲಾ ಸರ್ಕಾರಗಳ ಅವಧಿಯಲ್ಲೂ ನಡೆದಿದೆ. ಇದರಲ್ಲಿ ಯಾರು ಸತ್ಯಹರಿಶ್ಚಂದ್ರ ಅಲ್ಲ
ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ ನಾಗರಾಜ್ ತಿಳಿಸಿದ್ದಾರೆ.
ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಾಕರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 40% ಪರ್ಸೆಂಟ್ ಕಮಿಷನ್ ಪಡೆದರೆ ಗುತ್ತಿಗೆದಾರ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಈಶ್ವರಪ್ಪ ಅವರ ವಿರುದ್ಧ ಈಗಾಗಲೇ ಎಫ್.ಐ.ಆರ್. ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಸತ್ಯಾಸತ್ಯಾತೆ ಹೊರಬಿಳಲಿದೆ ಎಂದರು.
ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ. ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ ಎಂದು ಪ್ರಶ್ನಿಸಿದರು. ಮಂತ್ರಿಯಾದವರೂ 40% ಪಡೆದರೆ ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತದೆಯೇ ಎಂದರು. ಪಕ್ಷದ ಮಾತಿಗೆ ಬದ್ಧರಾಗಿ ಈಶ್ವರಪ್ಪ ಅವರೇ ಖುದ್ದು ರಾಜೀನಾಮೆ ನೀಡಿದ್ದಾರೆ. ತನಿಖೆ ನಡೆಯುತ್ತಿದ್ದು ಸತ್ಯಾಸತ್ಯತೆ ಹೊರ ಬಂದ ನಂತರ ಪುನಃ ಸಚಿವ ಸಂಪುಟಕ್ಕೆ ಬರುತ್ತಾರೆ ಎಂದು ಹೇಳಿದರು.
PublicNext
15/04/2022 05:07 pm