ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆ ಗುಣಮಟ್ಟ ಪರಿಶೀಲನೆಗೆ ಶಾಸಕ ಲಿಂಬಾವಳಿ ಬೈಕ್ ಸವಾರಿ!

ಮಹಾದೇವಪುರ: 75ನೇ‌ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಪ್ರಯುಕ್ತ ಮಹಾದೇವಪುರ ಕ್ಷೇತ್ರದಲ್ಲಿ ಕ್ಲೀನ್ ಸ್ಟ್ರೀಟ್-75ಕೆ ಚಾಲೆಂಜ್ ತಪಾಸಣೆ ಕಾರ್ಯಕ್ಕೆ ಶಾಸಕ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಮಹಾದೇವಪುರದ ಕಾಡುಬೀಸನಹಳ್ಳಿ ಅಂಡರ್ ಪಾಸ್ ನಿಂದ ಪಣತ್ತೂರು ರಸ್ತೆ ಜಂಕ್ಷನ್ ವರೆಗೆ 75 ಕಿ.ಮೀ. ಪ್ರಮುಖ ರಸ್ತೆಗಳನ್ನು ಬೈಕ್ ಸವಾರಿ ಮಾಡುವ ಮೂಲಕ ಶಾಸಕರು ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ರಸ್ತೆಗಳ ಆಗಲೀಕರಣ ಹಾಗೂ ಸುಧಾರೀಕರಣ ಸೇರಿದಂತೆ ಮೂಲ ಸೌಕರ್ಯಗಳು ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿಗೆ ಖಾಸಗಿ ಕಂಪನಿಗಳು ಸಹ ಕೈಜೋಡಿಸಿವೆ. ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದ್ದು, ಕಾವೇರಿ ಪೈಪ್ ಲೈನ್, ಯುಜಿಡಿ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.

Edited By : Manjunath H D
Kshetra Samachara

Kshetra Samachara

09/04/2022 10:52 pm

Cinque Terre

4 K

Cinque Terre

0

ಸಂಬಂಧಿತ ಸುದ್ದಿ