ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೀಡಿರುವ ಸಾಂಸ್ಕೃತಿಕ ಭಯೋತ್ಪಾದನೆ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಾರ್ಟಿ ಹಿಂದಿನಿಂದಲೂ ಭಯೋತ್ಪಾದಕರಿಗೆ ಬೆಂಬಲ ಕೊಟ್ಟಿದೆ. ಅಲ್ - ಖೈದಾ, ಇಂಡಿಯನ್ ಮುಜಾಹಿದ್ದೀನ್ ಮೇಲಿನ ಕೇಸ್ ತೆಗೆಯಲಿಕ್ಕೆ ಇವರೇ ಪ್ರಯತ್ನ ಪಟ್ಟಿದ್ದರು.
ಸಿದ್ದರಾಮಯ್ಯಗೆ ಹಿಂದು, ಹಿಂದು ಸಂಸ್ಕೃತಿ ಹಿಂದಿ ಅಂದ್ರೆ ಆಗಲ್ಲ. ಅವರಿಗೆ ರಾಷ್ಟ್ರ ಹಾಗೂ ಭಯೋತ್ಪಾದನೆ ಮಧ್ಯೆ ವ್ಯತ್ಯಾಸ ಗೊತ್ತಿಲ್ಲ ಎಂದು ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು.
PublicNext
09/04/2022 03:32 pm