ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಭಿವೃದ್ಧಿ ಜಲ, ಅಂತರರಾಜ್ಯ ವಿಚಾರಗಳ ಬಗ್ಗೆ ಕೇಂದ್ರ ನಾಯಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು: 2023ರ ಚುನಾವಣೆಗೆ ಪಕ್ಷದಲ್ಲಿ ಒಂದಷ್ಟು ಬದಲಾವಣೆ ಮತ್ತು ಉತ್ತಮ ಆಡಳಿತಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದರು. ದೆಹಲಿ ಭೇಟಿ ಮುಗಿಸಿ ಈಗ ಬೊಮ್ಮಾಯಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನ‌ ಭೇಟಿ ಮಾಡಿ ರಾಜ್ಯ ರಾಜಕಾರಣ, ಚುನಾವಣೆಗೆ ಸಂಬಂಧಿಸಿ ಚರ್ಚೆ ಮಾಡಿದ್ದಾರೆ. ಜೆ.ಪಿ‌ ನಡ್ಡಾರವರು ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆಗಾಗಿ ರಾಜ್ಯಕ್ಕೆ ಬರಲಿದ್ದಾರೆ. ಕಾರ್ಯಕಾರಿಣಿ ನಂತರ ಸಚಿವಸಂಪುಟದ ರಚನೆ ಎಂದರು.

ದೆಹಲಿಯಲ್ಲಿ ಸಚಿವ ಸಂಪುಟದ ಬಗ್ಗೆ ವಿವರವಾದಂತಹ ಚರ್ಚೆಮಾಡಲಾಗಿದೆ. ನಡ್ಡಾರವರು ವರಿಷ್ಡರ ಜೊತೆ ‌ಮಾತನಾಡಿ ಸಮಯಕೊಡ್ತೀನಿ ಅಂತ ಹೇಳಿದ್ದಾರೆ. ಏನೆಲ್ಲ ಬದಲಾವಣೆಗಳಾದರು ಬಿಜೆಪಿಯ ಕಾರ್ಯಕಾರಿಣಿಯ ನಂತರವೇ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ.

Edited By :
PublicNext

PublicNext

07/04/2022 03:05 pm

Cinque Terre

34.2 K

Cinque Terre

0

ಸಂಬಂಧಿತ ಸುದ್ದಿ