ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಚಿವ ಸಂಪುಟ‌ ವಿಸ್ತರಣೆಗೆ ಹೈಕಮಾಂಡ್ ನ ಅಂತಿಮ‌ ಮುದ್ರೆ, ದೆಹಲಿಗೆ ತೆರಳಿದ ಸಿ.ಎಂ

ಬೆಂಗಳೂರು ; ಎಪ್ರಿಲ್ ಒಂದಕ್ಕೆ ಸಿದ್ದಗಂಗಾಶ್ರೀಗಳ ಜಯಂತಿಗೆ ಕೇಂದ್ರಸಚಿವ ಅಮಿತ್ ಷಾ ಆಗಮಿಸಿದ್ದ ವೇಳೆಯೇ ಸಚಿವ ಸಂಪುಟದ ಪುನರ್ಚನೆಗೆ ಬೊಮ್ಮಾಯಿ ಮುಂದಾಗ್ತಾರೆ ಎಂದೇ ಎಲ್ಲಾ ಭಾವಿಸಿದ್ದರು. ಆದರೆ‌ ಕಾರಾಣಾಂತರಗಳಿಂದ ಒಂದು ವಾರ ಮುಂದೂಡಲ್ಪಟ್ಟಿತ್ತು.

ಇದೀಗ ಸಂಪುಟ ಪುನರ್ಚನೆ ಕಾರ್ಯ ಚುರುಕುಗೊಳ್ತಿದೆ. ಹೈಕಮಾಂಡ್ ನ ಬುಲಾವಿನ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ ದೇವನಹಳ್ಳಿ ಏರ್ಪೋರ್ಟ್ ಮೂಲಕ ದೆಹಲಿಗೆ ತೆರಳಿದರು.

ಈ ವೇಳೆ ಮುಖ್ಯಮಂತ್ರಿಗೆ ಸಚಿವರಾದ ಗೋವಿಂದ ಕಾರಜೋಳ, ಸುನೀಲ್ ಕುಮಾರ್ & ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By :
Kshetra Samachara

Kshetra Samachara

05/04/2022 08:32 pm

Cinque Terre

1.76 K

Cinque Terre

0

ಸಂಬಂಧಿತ ಸುದ್ದಿ