ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ ಮಾಡಲು ಕ್ಷಣಗಣನೆ ಆರಂಭವಾಗಿದೆ.
ಸದ್ಯ ಬಜೆಟ್ ಬಿತ್ತಿ ಚಿತ್ರವನ್ನು ಡ್ರೋನ್ ಮೂಲಕ ಪ್ರಚಾರ ಮಾಡಲಾಗುತ್ತಿದೆ.
ವಿಧಾನಸೌಧದ ಬಳಿ ಡ್ರೋನ್ ಹಾರಾಟ ಆರಂಭವಾಗಿದ್ದು ಸಿಎಂ ಬಸವರಾಜ್ ಬೊಮ್ಮಾಯಿ ಫೋಟೋ ಇರುವ ಬಟೆಟ್ ಬಿತ್ತಿಚಿತ್ರ ಗಗನದಲ್ಲಿ ರಾರಾಜಿಸುತ್ತಿದೆ.
ಇನ್ನು ಮೊದಲ ಬಾರಿಗೆ ಆಕಾಶದಲ್ಲಿ ಬಜೆಟ್ ವೊಂದರ ಪ್ರಚಾರ ನಡೆಯುತ್ತಿದ್ದು, ವಿಧಾನ ಸೌಧದ ಸುತ್ತ ಡ್ರೋನ್ ರೌಂಡ್ಸ್ ಹಾಕುತ್ತಿದೆ.
PublicNext
04/03/2022 12:17 pm