ಬೆಂಗಳೂರು: ಬಿಜೆಪಿಯವರು ಬಹುತೇಕ ಕ್ಷೇತ್ರಗಳನ್ನು ಖಾಸಗೀಯವರಿಗೆ ಮಾರಾಟ ಮಾಡಿದ್ದಾರೆ. ಅವರಿಂದ ನಮಗೆ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ರಮಾನಾಥ್ ರೈ ಟಾಂಗ್ ಕೊಟ್ಟಿದ್ದಾರೆ.
ಈ ದೇಶವನ್ನು 70 ವರ್ಷ ಕಾಂಗ್ರೆಸ್ ಆಳಿದೆ. ನಮಗೆ ನಿನ್ನೆ ಮೊನ್ನೆ ಬಂದವರು ತಿಳಿ ಹೇಳುವುದು ಬೇಡ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೊಂಕು ಮಾತನಾಡಿದ್ದರು, ಈಶ್ವರಪ್ಪ, ಯತ್ನಾಳ್ ಪಾದಯಾತ್ರೆ ಕುರಿತು ಲೇವಡಿ ಮಾಡಿದ್ದರು. ಹೀಗಾಗಿ ರಮಾನಾಥ್ ರೈ ಖಾರವಾಗಿಯೇ ಬಿಜೆಪಿ ನಾಯಕರಿಗೆ ಪಬ್ಲಿಕ್ ನೆಕ್ಸ್ಟ್ ಮೂಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.
PublicNext
02/03/2022 07:55 am