ದೊಡ್ಡಬಳ್ಳಾಪುರ: ಬೆಸ್ಕಾಂನಿಂದ ಗುಣಮಟ್ಟದ ವೋಲ್ಟೇಜ್ ಕೊಡದ ಹಿನ್ನೆಲೆ ರೈತರು ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹಣಬೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಣಮಟ್ಟದ ವೋಲ್ಟೇಜ್ ಸರಬರಾಜು ಆಗುತ್ತಿಲ್ಲ, ರೈತರ ಪಂಪ್ ಸೇಟ್ ಗಳಿಗೆ 300 ರಿಂದ 400 ವೋಲ್ಟೇಜ್ ಕೊಡಬೇಕು. ಆದರೆ ಕಳೆದೊಂದು ತಿಂಗಳಿಂದ 100 ವೋಲ್ಟೇಜ್ ಕೊಡುತ್ತಿದ್ದಾರೆ. ಕಡಿಮೆ ವೋಲ್ಟೇಜ್ ನಿಂದ ಪಂಪ್ ಸೆಟ್ ರನ್ ಆಗುತ್ತಿಲ್ಲ.ಇದರಿಂದ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ ಎಂದು ರೈತರು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ಕಡಿಮೆ ವೋಲ್ಟೇಜ್ ನಿಂದ ಪಂಪ್ ಸೆಟ್ ಗಳು ಸುಟ್ಟು ಹೋಗಿವೆ. ಇವುಗಳ ರಿಪೇರಿಗೆ 20 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತಿದೆ. ಈಗಾಗಲೇ ಹಲವು ಪಂಪ್ ಸೆಟ್‌ಗಳು ಸುಟ್ಟು ಹೋಗಿವೆ. ಬೆಸ್ಕಾಂ ನವರು ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬೇಕು, ಮಾಡದಿದ್ದಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
Kshetra Samachara
18/02/2022 05:57 pm