ಹೊಸಕೋಟೆ: ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ, ಯಾರೂ ಶತ್ರುಗಳಲ್ಲ ಎನ್ನುವುದು ಸಾಬೀತಾಗುತ್ತಲೇ ಇದೆ.
ಸದ್ಯ ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ ವಿರುದ್ಧ ಮೂಲ ಕಾಂಗ್ರೇಸಿಗರು ಬಂಡಾಯ ಎದ್ದಿದ್ದಾರೆ ? ಹಿರಿಯರನ್ನು ಪರಿಗಣಿಸದೆಯೇ ತಮಗೆ ಬೇಕಾಗಿರುವ, ಹಣ ನೀಡುವವರನ್ನು ಪಕ್ಷದ ವಿವಿಧ ಸಮಿತಿ, ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡ್ತಿದ್ದಾರೆ ಎಂದು ಮೂಲ ಕಾಂಗ್ರೆಸ್ ಮುಖಂಡರು ಶರತ್ ವಿರುದ್ಧ ಸಿದ್ದರಾಮಯ್ಯನಿಗೆ ದೂರು ನೀಡಿದ್ದಾರೆ.
ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸಾಗ್ತಾರಾ MTB ? ಮೂಲ ಕಾಂಗ್ರೆಸ್ ನಾಯಕರ ಜೊತೆ MTB ನಾಗರಾಜ್ ಸಂಪರ್ಕದಲ್ಲಿದ್ದಾರೆ ಎನ್ನುತ್ತಿದೆ ಹೊಸಕೋಟೆ ತಾಲೂಕಿನ ರಾಜಕೀಯ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು ಸೂಕ್ತ ಸ್ಥಾನ ಇಲ್ಲ ಎಂಬ ನೋವನ್ನು MTB ಅನೇಕ ಸಲ ಹೊರ ಹಾಕಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಅಪ್ಪಮಗ.
ಅಪ್ಪ ಬಚ್ಚೇಗೌಡ ಬಿಜೆಪಿಯ ಚಿಕ್ಕಬಳ್ಳಾಪುರ ಸಂಸದ ಆದರೆ ಇತ್ತ ಮಗ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಹೊಸಕೋಟೆಯ ಶಾಸಕ. ತಮ್ಮ ರಾಜಕೀಯಕ್ಕಾಗಿ ಅಪ್ಪ-ಮಗ ಏನಾದರು ಮಾಡ್ತಾರೆ ಎನ್ನುತ್ತಿದೆ ಹೊಸಕೋಟೆಯ ರಾಜಕೀಯ ಪಡಸಾಲೆ. 2018ರಲ್ಲಿ ಕಾಂಗ್ರೆಸ್ ನಲ್ಲಿದ್ದ MTB ಆಪರೇಷನ್ ಕಾರಣ ಬಿಜೆಪಿ ಸೇರಿದರು.ಆಗ ಬಿಜೆಪಿಯಿಂದ ನಿಂತು ಸೋತಿದ್ದ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದು, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.
ಈಗ ಅಪ್ಪ ಮಗ ಪ್ಲಾನ್ ಮಾಡಿ ಕೇಂದ್ರದಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿದ್ದಾರೆ. ಶರತ್ ಮತ್ತೆ ಬಿಜೆಪಿಗೆ ಹೋಗುವುದಾದರೆ MTB ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂಬುದು ಮೂಲ ಕಾಂಗ್ರೇಸಿಗರ ವಾದ.
ಇನ್ನು ಕಳೆದ ಹೊಸಕೋಟೆ ಉಪಚುನಾವಣೆಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ 'ಪದ್ಮಾವತಿ ಸುರೇಶ್ (ಹೆಬ್ಬಾಳ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಪತ್ನಿ)ರನ್ನು ಮೂಲ ಕಾಂಗ್ರೆಸ್ ಮುಖಂಡರು ಭೇಟಿಯಾಗಿ ರಾಜಕೀಯ ವಿದ್ಯಮಾನಗಳ ಬಗ್ಗೆ ದೀರ್ಘ ಚಚ್ಚೆ ನಡೆಸಿದ್ದಾರೆ.
ಅದೇನೆ ಇರಲಿ ಕೊರೊನಾ ಆತಂಕದ ವೇಳೆ ಹೊಸಕೋಟೆ ರಾಜಕೀಯ ರಣಾಂಗಣ ಮತ್ತೆ ಕಾವೇರುತ್ತಿದೆ.ಯಾರು ಎಲ್ಲಿರ್ತಾರೊ ? ಯಾರು ಪಕ್ಷ ಬಿಡ್ತಾರೊ, ಯಾವ ಪಕ್ಷಕ್ಕೆ ಸೇರ್ತಾರೋ ಎನ್ನುವುದೇ ಸದ್ಯದ ಕುತೂಹಲ.
PublicNext
06/02/2022 02:55 pm