ಬೆಂಗಳೂರು: ವಸತಿ ಶಾಲೆ,ಹಾಸ್ಟೆಲ್ ಗಳಲ್ಲಿ ಈಗ ಕೊರೊನಾ ಹೆಚ್ಚಾಗುತ್ತಿದೆ. ಆದರೆ ಇವುಗಳನ್ನ ಬಂದ್ ಮಾಡುವ ವಿಚಾರ ಆಯಾ ಡಿಸಿಗಳಿಗೇನೆ ಬಿಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಮಾತನಾಡಿದ ಬಳಿಕವೇ ಮಾಧ್ಯಮಕ್ಕೆ ಗೃಹ ಸಚಿವ ಈ ಹೇಳಿಕೆ ಕೊಟ್ಟಿದ್ದಾರೆ.
ಮಕ್ಕಳಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಔಷಧಿ ಕೊರತೆ ಆಗದಂತೆ ಚಿಕಿತ್ಸೆ ನೀಡಲು ಹೇಳಲಾಗಿದೆ. ಮಕ್ಕಳಿಗಾಗಿ ವಾರ್ಡ್ ಬೆಡ್ ರಿಸರ್ವ್ ಮಾಡಲು ಹೇಳಲಾಗಿದೆ.ಹಬ್ಬಗಳು ಬರ್ತಾ ಇದ್ದಾವೆ. ಇರುವ ಗೈಡ್ ಲೈನ್ಸ್ ಅನ್ನು ಕಠಿಣವಾಗಿ ಫಾಲೋ ಮಾಡಲು ತಿಳಿಸಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇನ್ನು ಕೊರೊನಾ ಕೇಸ್ ದಿನವೂ ಹೆಚ್ಚಾಗುತ್ತಲೇ ಇದೆ. ಎರಡನೇ ಅಲೆಯಲ್ಲಿ ಮಾರ್ಕೆಟ್ ವಿಕೇಂದ್ರೀಕರಣ ಮಾಡಲಾಗಿತ್ತು. ಈಗಲೂ ಅದೇ ತಿರ್ಮಾನ ತೆಗೆದುಕೊಳ್ಳಲಾಗಿದೆ ಅಂತಲೇ ಆರಗ ಜ್ಞಾನೇಂದ್ರ ವಿವರಿಸಿದ್ದಾರೆ.
PublicNext
11/01/2022 06:28 pm