ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತೆರೆದ ವೇದಿಕೆಯಲ್ಲಿ ಬಿಜೆಪಿಯ ವಿಶ್ವರೂಪ ದರ್ಶನ ಆಗಿದೆ: ಡಿಕೆಶಿ

ಬೆಂಗಳೂರು: ಸಂಸದ ಡಿ.ಕೆ ಸುರೇಶ್ ವಿರುದ್ಧ ಬಿಜೆಪಿಯವರು ರಾಜ್ಯ ಮಟ್ಟದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತ ಹೋರಾಟ ಮಾಡಲಿ. ಒಬ್ಬ ಮಂತ್ರಿಯಾಗಿದ್ದವರು ನುಡಿಮುತ್ತುಗಳನ್ನಾಡಿದ್ದಾರೆ. ಆ ಮಾತುಗಳನ್ನು ಸಿಎಂ, ಬಿಜೆಪಿ ಅಧ್ಯಕ್ಷ, ಅಶೋಕ್ ಸರ್ಟಿಫೈ ಮಾಡಿದ್ದಾರೆ. ತೆರೆದ ವೇದಿಕೆಯಲ್ಲಿ ಅವರ ಸಂಸ್ಕೃತಿ ಅನಾವರಣ ಆಗಿದೆ. ಬಿಜೆಪಿಯ ವಿಶ್ವರೂಪ ದರ್ಶನ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿನ್ನೆ ಸೋಮವಾರ ರಾಮನಗರದಲ್ಲಿ ವೇದಿಕೆ ಮೇಲೆ ಸಚಿವ ಅಶ್ವತ್ಥನಾರಾಯಣ ವರ್ತನೆಯನ್ನು ಖಂಡಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣ ನೀಡಬೇಕು. ರಾಜ್ಯದ ನಾಯಕರು ಮೊದಲು ಆ ಹಣ ಪಡೆಯಲಿ. ಕೊರೊನಾ ಹೆಸರಿನಲ್ಲಿ ವಿಮಾನ ನಿಲ್ದಾಣಗಳಲ್ಲಿ ಜನರಿಗೆ ತೊಂದರೆ ಕೊಡಲಾಗುತ್ತಿದೆ. ಜನ ಕಷ್ಟದಲ್ಲಿದ್ದಾರೆ. ಇದೆಲ್ಲದರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ನಮ್ಮ ಮೇಲೆ ಕೊರೊನಾ ನಿಯಮ ಉಲ್ಲಂಘನೆ ಕೇಸ್ ಹಾಕಿದ್ದಾರೆ. ಆದರೆ ಬಿಜೆಪಿಯವರು ಮೆರವಣಿಗೆ ಮಾಡಿದ್ದಾರಲ್ಲ, ಅವರ ಮೇಲೆ ಯಾಕೆ ಕೇಸ್ ಆಗಿಲ್ಲ? ಸಿಎಂ ವಿರುದ್ಧವೂ ಕೇಸ್ ಆಗಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.

Edited By : Nagesh Gaonkar
PublicNext

PublicNext

04/01/2022 03:03 pm

Cinque Terre

32.06 K

Cinque Terre

0

ಸಂಬಂಧಿತ ಸುದ್ದಿ