ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 2023 ವರೆಗೂ ಬೊಮ್ಮಾಯಿ ಸಿಎಂ ಆಗಿ ಮುಂದುವರಿಯಲಿದ್ದಾರೆ- ಜಯಮೃತ್ಯುಂಜಯ‌ ಶ್ರೀ

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಉಹಾಪೋಹಕ್ಕೆ ಒಳಗಾಗಿರುವ ಸಿಎಂ ಬೊಮ್ಮಾಯಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಜಯಮೃತ್ಯುಂಜಯ‌ಶ್ರೀ,ಪಂಚಮಸಾಲಿ ಜಗದ್ಗುರು ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಬೆಂಬಲದ ಬಗ್ಗೆ ಶ್ರೀಗಳು ಅಸ್ಪಷ್ಟವಾಗಿ ಮಾತನಾಡಿದ್ದಾರೆ. ಅವರು ಎಲ್ಲಿಯವರೆಗೆ ಇರ್ತಾರೆ ಅಲ್ಲಿಯವರೆಗೆ ಬೆಂಬಲ ನೀಡುತ್ತೇವೆ. ೨೦೨೩ ರವರೆಗೆ ಅವರೇ ಮುಂದುವರೆಯುತ್ತಾರೆ, ಅಲ್ಲಿಯವರೆಗೂ ನಮ್ಮ ಬೆಂಬಲವಿದೆ.ಬದಲಾವಣೆ ಪಕ್ಷದ ಆಂತರಿಕ ವಿಚಾರ ಅದರ ಬಗ್ಗೆ ಮಾತನಾಡುವುದು ಅಷ್ಟು ಸಮಂಜಸವಲ್ಲ ಎಂದಿದ್ದಾರೆ.

ಬೊಮ್ಮಾಯಿ ಯಡಿಯೂರಪ್ಪನವರಂತಲ್ಲ ಮೀಸಲಾತಿ ಬಗ್ಗೆ ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಹಾಗಾಗಿ ಅವರ ಮೇಲೆ ಅಸಮಾಧಾನವಿತ್ತು. ಆದರೆ ಬೊಮ್ಮಾಯಿಯವರು ಅಂತವರಲ್ಲ, ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ,ಉತ್ತಮ ಪ್ರಯತ್ನಗಳನ್ನ ನಡೆಸ್ತಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/12/2021 03:02 pm

Cinque Terre

536

Cinque Terre

0

ಸಂಬಂಧಿತ ಸುದ್ದಿ